ನೆನಪ ನೆಪದಲ್ಲಿ

ನನ್ನ ಮನಸಲ್ಲಿ

ಕಣ್ಣ ಕನಸಲ್ಲಿ

ಬಿಸಿಯ ಉಸಿರಲ್ಲೂ

ನೀನೇನಾ ?|1|
ನೆಪವು ಹಟವಾಗಿ

ಬಿಡದ ಚಟ(ತಪ)ವಾಗಿ

ಮನದ ಹಟಯೋಗಿ

ಸುಖವ ಮರೆಯಲು

ಬೀಸಿದ ಮಾಯೆ ನೀನೇನಾ?|2|
ಮುಕ್ತಾಯ-೧

ತಿಂಗಳಿನ್ನೊಂದು,
ನೀ ಮರೆಯಾಗುವೆ

ನಂಬಿದ ಯುವಕರ

ಬಾಯಿ ತೊರೆವೆ, ಗುಟ್ಕಾ

ಮುಕ್ತಾಯ-೨

ಇಡೀ ತಿಂಗಳಲಿ

ಓದಿದ, ಮರೆತುದ

ಸಾಣೆಗೆ ಹಚ್ಚೋ ವಾರ್ನಿ೦ಗ್ ಬೆಲ್

ಮತ್ತೆ ಬಂದೆಯಾ ಇಂಟರ್ನಲ್..