ಕಣ ಕಣದಲಿ ಅನುವಾಗಿರು ,
ಕನ್ನಡಾಂಬೆಯ ದನಿಯಗಿರು
ನಿನ್ನಯ ಕಣ್ಣಲ್ಲಿನ ಕಣ್ಣೀರು ,
ಕಾವೇರಿ ತೀರದ ಪನ್ನೀರು
ಧಹಿಸುತಿದೆ ಧಗ ಧಗನೆ ಕನ್ನಡಾಂಬೆಯ ಮಡಿಲು
ತನ್ನ ಹಸುಗುಸಗಳನು ಹುಡುಕುತಲಿಂದು
ಕನ್ನಡತನವನು ಅಳಿಸಿ ,ಪರಭಾಷೆಯನು ಅಪ್ಪಿರುವ
ಹಸುಗುಸುಗಳನು ಗುರುತಿಸದಾಗಿಹಳು ನೊಂದು
ಅವಳ ರೋಧನೆ ಆಲಿಸದ ಕನ್ನಡ ಕುವರ್ ನೀನು
ನಿನ್ನತನಕ್ಕಾಗಿ ಅವಳನ್ನೇ ಬಲಿಕೊಟ್ಟ ಜಗದೇಕ ವೀರ ನೀನು
ನೀನು ಏನಾದರೇನು , ಕನ್ನಡತನವಿಲ್ಲದಿದ್ದರೆ ಕೊಳೆತ ಜೇನು
ನಿನ್ನ ಜನನ ಹೇಗೆ ಸಹಿಸಿದಲೋ ,ತಾಯಿ ಕನ್ನಡಾಂಬೆ ತಿಳಿಯದಾದೆ ನಾನು
ಸರ್ವ ಭಾಷಿಕರ ,ಸಹಬಾಳಿತ್ವದ ಸಂಸ್ಕೃತಿಯ ತವರೂರು
ಡಿವಿಜಿ,ಕುವೆಂಪು ,ಬೇಂದ್ರೆಯವರು ಕಟ್ಟಿಬೆಳೆಸಿದ ಸಿರಿ ನಾಡು
ಸಮಾನ ಸಹಿಸ್ಣುತೆಯ ದುರುಪಯೋಗ ಸಹಿಸೆವು ಮುಂದೆದು
ಅನ್ಯಭಾಷಿಕರು ತಲೆತಗ್ಗಿ ಗೌರವಿಸಿ ಕನ್ನಡಾಂಬೆಯನ್ನು,
ಕೊನೆಯಾಗದಿರಲಿ ನಮ್ಮೆಲ್ಲರ ಬ್ರಾತುತ್ವ ಇನ್ನೆಂದು
ಸ್ವಾತಂತ್ರ್ಯಕ್ಕಾಗಿ ನೂರಾರು ಬಲಿದಾನಗಳು ಅಂದು !
ಕನ್ನಡಕಾಗಿ ಒಂದು ಕೂಗಿಲ್ಲವೇ ಇಂದು ?
ಕನ್ನಡದ ಹೆಸರಲ್ಲಿ ಸಹಿಸೋಲ್ಲ ರಾಜಕೀಯ , ಗುಂಪುಗಾರಿಕೆ ನಾವು
ಇನ್ನಾದರೂ ಎಚ್ಚೆತ್ತು ಒರೆಸಿರಿ ತಾಯಿಯ ಕಣ್ಣೀರು
ಇಲ್ಲವಾದರೆ ಬಿಟ್ಟು ತೊಲಗಿ ನನ್ನ ತಾಯಿಯ ನಾಡು
ಹೃದಯದಿಂದ
ಮಹಾಂತೇಶ (ಮಾನು)
ಪ್ರತಿಕ್ರಿಯೆ (1)