ಕನಸಲು ಕರಗದ ನೋವಿದೆ ,

ನೋವಿನ ಜೊತೆಯಲಿ ಬಾಳಿದೆ

ಕಣ್ಣನು ಮುಚ್ಚುವ ಮೊದಲೇ 

ಕಣ್ಣಲಿ ಕಣ್ಣೀರಿನ ನದಿಯಿದೆ 

 

ಸಾಗುವ ದೂರವು ಕೊನೆಯಗದು ಎಂದು

ನಿನ್ನಯ ಜೊತೆಯಲಿನ ಆ ಕ್ಷಣಗಳನು ನೆನೆದು

ನೀನಿಲ್ಲದಿದ್ದರೇನು , ನೀನ್ನಯ ಬಿಂಬ ನನ್ನೆದುರಲಿ ನಿಂದು

ನೋವಿನಲಿ ಹುಸಿನಗೆಯ ತೋರುತಿಹುದಿಂದು

 

ಹೃದಯದಳದಲಿ ನೋವಿನ ಗವಿಯಿದೆ

ತುಟಿಯಂಚಿನಲಿ ಕಾಣದ ನಗುವಿದೆ

ಜೀವನದಲಿ ಏನಾದರೇನು

ನೀನಿಲ್ಲವೆಂಬ ನೋವಿಲ್ಲವೇನು ?

 

ಸಾಗಿದೆ ಪಯಣವು ಎಂದು ಕೂಡದ ಕಡಲ ತೆರೆಗೆ

ನೆನಪುಗಳೆಂಬ ಉಪ್ಪು ನೀರು ನಮ್ಮನಡುವೆ

ಕುಡಿಯಲು ಆಗದು ಆದರೆ ಅದೇ ಅಮೃತ ನಮಗಿಂದು

ಉಪ್ಪು ನೀರೆ ನಮ್ಮ್ಬಿರ ನಡುವಿನ ಬಂಧು

 

ಮುಂದೆಂದು ಜೊತೆಯಗೆವು ಎಂಬ ನಿಜವನು ಅರಿತಿವೆವು

ಆದರು ನಿನ್ನ ನೆನೆದೊಡನೆ ಕಣ್ಣಂಚಲಿ ಕಣ್ಣೀರಿನ ಪುಳಕವೇನು ?

ಜೊತೆಯಲ್ಲಿರದೆ ಸಂತೋಷವಾಗಿರಲು ಸಾದ್ಯವೇನು ?

ಆದರೂ ಅಷಿಶಿತಿರುವುದು ಮನವು ಸುಖವಾಗಿರು ನೀನೆಂದು

ಎಂಥ ಮೂರ್ಖ ಮನವಿದು ನನ್ನದು 

 

                                                                         ಹೃದಯದಿಂದ

                                                                       ಮಾನು(ಮಹಾಂತೇಶ )