ವಾರ್ಷಿಕೋತ್ಸವ
ಆಹಾ ನನ್ನ ಮದುವೆಯಂತೆ
ಎಂದು ಹರ್ಷಿಸಿದ್ದೆ ಅಂದು,
ದ್ವಾದಶ ಸಂವತ್ಸರವ ಕಳೆದಿರುವೆವು
ಮದುವೆಯಾಗಿ ನಾವು ಇಂದು,
ನಾ ನೋಡಿದಾಗ ನನ್ನ
ಜೀವನ ಪಥವ, ಹಿಂದು, ಮುಂದು,
ತಿಳಿದೆನು, ಬಾಳಲ್ಲಿ ಸಾಧಿಸುವುದು
ಇನ್ನೂ ಬಹಳ ಉಳಿದಿದೆ ಎಂದು
ಸಂಗಾತಿಯಾಗಿ ಬಂದಿದ್ದಳು ಅಂದು
ಸಖ್ಹಿಯಾಗಿ, ಸುಖ್ಹಿಯಾಗಿ ಇರುವಳು ಇಂದು
ಕಳೆದೆವು ಜೊತೆಯಾಗಿ, ಹಿತವಾಗಿ
ಹನ್ನೆರಡು ವರುಷವ,
ಪಡೆದಿದ್ದೆವು ಬಾಳಲ್ಲಿ ಎಂದೆದೂ ಹರುಷವ
ಅಂದು ಕಳೆದಿತ್ತು ನನ್ನ ನೌಕರಿ ,
ಅಗ ನನಗೆ ಮದುವೆಯಾಗಿ ಮೊರೇ ತಿಂಗಳು
ಕ್ಯೆ ಹಿಡಿದು ಹೇಳಿದ್ದಳು ನನ್ನ ಮಡದಿ
ಬೇಕಾದ್ದು ಬರಲಿ, ನಾ ಇರುವೆ ಎಂದೊ ನಿಮ್ಮೊಡಗೂಡಿ,
ಜೀವನದ ಪಯಣದಲ್ಲಿ, ಪಯಣಿಸಿದೆವು ನಾವು
ಕಷ್ಟಕಾರ್ಪಣ್ಯಗಳ ಸೆಣೆಸುತ್ತಾ ಎಲ್ಲವನು ಗೆದ್ದೆವು
ನಮದೊಂದು ಸುಂದರ ಮನೆಯ ಕನಸು,
ಮಾಡಿದೆವು ನನಸು, ನಾವು ಜೊತೆಯಾಗಿ ನಿಂತು
ಕಾರು, ಬಂಗಲೆ ಬೇಕಾದ್ದು ಬಂದವು,
ದಾಂಪತ್ಯದಲ್ಲಿ ಸೊಗಡು , ಸೊಬಗು ಎಂದೂ ಇರುವವು
ನೆನೆಸಿದಾಗ ನಗುವೆವು, ನಗುವಾಗ ಹಳೆಯದ
ನೆನೆಯುವೆವು, ಜೀವನದಲ್ಲಿ ಪ್ರೀತಿ ನಂಬಿಕೆ ಇರಬೇಕೆಂದು.
ಇನ್ನು, ನಮಗೆ ಇರಲಿ ನೂರಾರು ಕನಸು,
ಆಗಲಿ ಅದೆಲ್ಲ ಸೊಗಸಾದ ನನಸು,
ಜೊತೆಯಾಗಿ , ಕಳೆಯೋಣ, ನಡೆಯೋಣ
ಈ ಜೀವನದ ಪಯಣದಲ್ಲಿ, ಆರದಿರಲಿ
ಬೆಳಕು, ಮುಳುಗದಿರಲಿ ಬದುಕು.
ಅರಿತೆವು ನಡೆಯುತ್ತಾ ಜೊತೆಯಾಗಿ,
ಜೀವನವು ಇರಬೇಕು ಹಿತವಾಗಿ, ಮಿತವಾಗಿ,
ಕಂಡದೆಲ್ಲಾ ಬಯಸದಿರು, ಕೇಳಿದ್ದೆಲ್ಲಾ ನಂಬದಿರು,
ಜನಬಲವು, ಹಣಬಲವು ಇರಬೇಕು ಎಂದೆಂದೂ
ಸಾಗುವೆವು, ಸೇರುವೆವು ಸರಿಸಮಾನರು ನಾವು
ಬೇದಭಾವಗಳಿಲ್ಲ, ಮೇಲು, ಕೀಳರಿಮೆ ಗೊತ್ತಿಲ್ಲ
ಬಾಳಲ್ಲಿ ಬದುಕುವೆವು, ಇತರರಿಗೆ ಮಾದರಿ
ದಂಪತಿಗಳೆಂದು, ನೀವು ಹರಸಿರಿ ನಮ್ಮನಿಂದು.
- ಮಧ್ವೇಶ್
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)