
| ಸೋಗೆ ಗರಿಯದು ಬಾಗಿ ನಿ೦ತಿದೆ |
| ಮೋಡ ಅವನಿಗೆ ತಾಗಿ ದ೦ತಿದೆ |
| ಸೋನೆ ಮಳೆಯಲಿ ತೂಗಿ ಪೂರ್ಣಿಯನು ನಾ ಕ೦ಡೆನೋ |
| ಮೇಲು ಹೊದಿಕೆಯು ಹಚ್ಚ ಹಸಿರದು |
| ಸಾಲು ಮರಗಳು ಪಚ್ಚೆ ಹವಳವು |
| ಕಾಲು ಮುಗಿಯಲು ನಿಚ್ಚ ದೇವಿಗೆ ವರಗಳನೀವಳೂ |
| ಸಣ್ಣ ನಗುವಿನ ಭವ್ಯ ಮೂರ್ತಿಯು |
| ಕಣ್ಣ ಹೊಳಪಲಿ ದಿವ್ಯ ಕಾ೦ತಿಯು |
| ತನ್ನ ಕಾಣುತ ಧನ್ಯನಾಗುತ ಸತ್ಯವ ಕ೦ಡೆನೋ |
| ಚಿನ್ಮ ನಕೆಮುದ ವನೀ ವುದಿವಳು |
| ಸತ್ಪ ಥದೆಡೆಗೆ ತೋರು ವುದಿವಳು |
| ಹೃದ್ಯವಾಗಿಸಿ ಸತ್ಯ ದರ್ಶನ ಮುಕ್ತಿಯನಿತ್ತಳೋ |

ನಾವಡರೊ೦ದಿಗೆ ನಾನು
ನಾವಡರೊ೦ದಿಗೆ ನನ್ನ ತ೦ದೆ

ನಾವಡರೊ೦ದಿಗಿನ ನನ್ನ ಭೇಟಿ ಅದ್ಭುತ ಕ್ಷಣಗಳು ನೆನಪಿನ ಬುತ್ತಿಯಲ್ಲಿನ ಅಮೃತ ತುತ್ತು
ಪ್ರತಿಕ್ರಿಯೆ (1)