ಅಮ್ಮಾ ಎಂಬ ಎರಡಕ್ಷರದಲಿ 

ಎಂತಹ ಮೋಡಿಯಿದೆ.
ಎಂದೂ ಮುಗಿಯದ ಮಾತೃ ಪ್ರೇಮದ
ಸುಮಧುರ ಬಂಧವಿದೆ.
ಕರುಳ ಬಳ್ಳಿಯ ಒಲವಿನ ಕೂಗನು
ಅರಿಯುವ ದೇವತೆಯು,
ಜನುಮ ಜನುಮದಲ್ಲೂ ರಕ್ಷಣೆ ಮಾಡುವ
ತಾಯಿ ಮಮತೆಯ ಪ್ರೇಮ ಸಿಂಧುವು.
ಅಮ್ಮಾ,ಇದೋ ನಿನಗೆ ನನ್ನ ವಂದನೆ
ನಿನ್ನ ಮಡಿಲ ಮುದ್ದು ಕಂದನ
ಅಂತರಂಗದ ನಿವೇದನೆ.