ಮುಸ್ಸಂಜೆ ಸಮಯದಲ್ಲಿ

ಶುರುವಾಗಿದೆ ಮುಂಗಾರು.
ಮುತ್ತಿನ ಹಾಗೆ ಸುರಿವ ಮಳೆಗೆ
ಬಿರಿದ ಚಿಪ್ಪಾಗಿದೆ ಮನವು.
ಎಲ್ಲಿ ನೋಡಿದರಲ್ಲಿ ವರ್ಷದ
ತುಂತುರು ಹನಿಗಳ ಬಳಗ.
ಬೆಚ್ಚಗಿನ ಗೂಡು ಸೇರಿದೆ
ಪಕ್ಷಿ ಸಂಕುಲದ ಕಲರವ.
ವರ್ಷದ ಮೊದಲ ವರ್ಷಧಾರೆ 
ತಂದಿದೆ ಭೂರಮೆಗೆ ಹರ್ಷಧಾರೆ.
ಎಲ್ಲೆಲ್ಲಿಯೂ ಹಚ್ಹ ಹಸುರಿನ
ಪಚ್ಚೆ ತೋರಣ.
ಅನಿಸುತಿದೆ,ಇದೇನಾ ಧರಣಿಗೆ 
ವರುಣನ ಪ್ರೀತಿಯ ಸಿಂಚನ.?