ಸುಭಿಕ್ಷ
ದಡ್ಡ ಸಿಟಿಯ ಮಾರುಕಟ್ಟೆಯ ಓಣಿ
ಯಲ್ಲಿ ಅಲೆಯುತ್ತಿರುವ ತ್ಯಾಂಪನಿಗೆ
ಕಂಡಿತೊಂದು ಗುಜರಿ ಅಂಗಡಿ
ಹಳೆ ಸಾಮಾನಿನ ಫ್ಯಾನಾಗಿರೋ ಆತ ನುಗ್ಗೇ ಬಿಟ್ಟ
ಒಳಗೆ, ತರಹಾವರಿ ಹಳೆ ಹಿತ್ತಾಳೆ ಕಂಚು ತಾಮ್ರದ
ಸಾಮಾನುಗಳು ಚಿಕ್ಕವು ದೊಡ್ಡವು ಬೊಂಬೆ
ಕತ್ತರಿ ಗೋಲ ಗ್ಲೋಬು ಆರತಿ ಚೆಂಬು
ಮೂರ್ತಿ ಲೋಟ ಪಿಂಗಾಣಿ ಗಾಜು
ಮಧ್ಯೆ ಕಂಡಿತು ಅರ್ಧ ಹಿತ್ತಾಳೆ ಕಂಚು
ತಾಮ್ರದ ಲೇಪನದ ನಿಜ ಜೀವಂತ
ವಾಗಿರೋ ಭ್ರಮೆ ತರಿಸೋ ಒಂದು ಇಲಿ
ಯ ವಿಗ್ರಹ ಕಂಡು ಖುಷಿಯಾದ
ಅದೇ ಖುಶಿಯಲ್ಲಿ ಕೇಳೇ ಬಿಟ್ಟ
ಇದರ ಬೆಲೆ ಎಷ್ಟು
ಅದಕ್ಕೆ ಮುನ್ನೂರು ಅಷ್ಟೇ
ಆದರೆ ಅದರ ಹಿಂದಿನ
ಇತಿಹಾಸಕ್ಕೆ ಮೂರು ಸಾವಿರ
ಎಂದ ಅಂಗಡಿಯಾತ
ಇತಿಹಾಸ ಯಾರಿಗೆ ಬೇಕು ಇಲ್ಲಿ
ತಕೋ ಇನ್ನುರಾ ಐವತ್ತು ಚೌಕಾಶಿಯಲ್ಲಿ
ಇಲಿ ಸಿಕ್ಕಿದ ಖುಷಿಯಲ್ಲಿ ಹೊಂಟ
ಅದ ಕೈಯ್ಯಲ್ಲಿ ಹಿಡಿದು ಬಂಟ
ಸಂಜೆಯ ಮಬ್ಬು ಬೆಳಕಲ್ಲಿ
ಹೊಂಬಣ್ಣದ ಬಣ್ಣದಲ್ಲಿನ
ಸವರಿದ ಅದರ ಬೆನ್ನು
ಯಾಕೋ ವಿಚಿತ್ರವೆನಿಸಿತು
ಜೀವಂತವೇ ಈ ಇಲಿ
ಯಾ ನನ್ನ ಭ್ರಮೆಯೇ ಇಲ್ಲಿ
ಆಗಲೇ ಪಕ್ಕದಲ್ಲೆಲ್ಲೋ ಚೀಕ್ ಚೀಕ್ ದನಿ
ಒಂದು ಎರಡಾಗಿ ನಾಲ್ಕಾಗಿ ನಾನೂರಾಗಿ
ನಾಲ್ಕು ಸಾವಿರವಾಗಿ ಸಂದು ಗೊಂದುಗಳಿಂದ
ತನ್ನಕಡೆಯೇ ಓಡಿ ಬರುತ್ತಿರುವ ಇಲಿಗಳು
ಸಣ್ಣಿಲಿ ದೊಡ್ಡಿಲಿ ಮೂಗಿಲಿ ಬಿಳಿ ಇಲಿ
ಕೆಮ್ಪಿಲಿ ಕಪ್ಪಿಲಿ ಅಮ್ಮಿಲಿ ಅಪ್ಪಿಲಿ
ನೋಡಿದ ತ್ಯಾಂಪ ಹೆದರಿ ಓಡುವ
ಹಿಂದೆ ಇಲಿಗಳು ಮುಂದೆ ಅವ
ಓಡಿ ಓಡಿ ಓಡಿ ಓಡಿಯೇ ಓಡಿದ
ಸಾವಿರ ಲಕ್ಷ ಸಂಖ್ಯೆಯಲಿ ಅವೂ
ಏನೂ ಮಾಡಲು ತೋಚದೇ
ಊರ ಹೊರಗೆ ಓಡುತ್ತ ಓಡುತ್ತ ಆತ
ಪಕ್ಕದ ಕಣಿವೆಯಲಿ ತನ್ನ
ಕೈಯ್ಯಲ್ಲಿದ್ದ ಇಲಿಯನ್ನು ಎತ್ತಿ ಬಿಸುಟ
ಆ ಇಲಿಯ ಹಿಂದೆಯೇ ಈ ದಂಡೂ
ಅಂತ್ಯ:
ಪುನಃ ಬಂದುದ ನೋಡಿದ ಅಂಗಡಿಯವ
ನಕ್ಕು ನುಡಿದ ತ್ಯಾಂಪನಿಗೆ
ಮೊದಲೇ ಗೊತ್ತಿತ್ತು ನಮಗೆ
ಅದರ ಇತಿಹಾಸ ಕೇಳ ಬಂದಿರಾ
ಮೂರು ಸಾವಿರ ತಂದಿರಾ?
ತ್ಯಾಂಪ ಕೇಳಿದ ಆಸಕ್ತಿಯಿಂದ
ನಮ್ಮ ರಾಜಕಾರಣಿಗಳ ಹಾಗಿನ
ಮೂರ್ತಿಗಳು ನಿಮ್ಮಲ್ಲಿ ಇವೆಯಾ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)