ಪ್ರೀತಿ ಇಲ್ಲದ ಮೇಲೆ

 

 

ನಗುವಿಲ್ಲ, ನಲಿವಿಲ್ಲ, ಬರಿ ನೋವು,
ಒಲವಿಲ್ಲ, ಗೆಲುವಿಲ್ಲ, ಬರಿ ಸೋಲಿನ ಕಾವು,
ನೆನಪಿನ ವಿಷಾದ ಛಾಯೆ ಸುತ್ತು,
ಬರಿ ಕಂಬನಿ ಧರೆಯ ಮುತ್ತು.
 
ಮಾತುಗಳು ಸತ್ತ ಆ ನೂರು ದಿನ,
ಸಣ್ಣ ಬೆಳಕಿಗಾಗಿ ಹುಡುಕಿದೆ ಕ್ಷಣಕ್ಷಣ,
ಬದುಕು ಕತ್ತಲಿನ ಕಾರ್ಮೋಡದಂತೆ,
ಹತ್ತು ಹಲವಾರು ಕರಗದ ಚಿಂತೆ.
 
ನೆನಪಿನಾಳದಲ್ಲಿ ಪ್ರೀತಿಯ ನೆಲೆ,
ಹಾತೊರೆಯಿತು ಕನಸು, ಮುಟ್ಟಲು ನೆಲೆ.
ನೆನೆದು ಬತ್ತಿ ಸೊರಗಿತು ಮನ,
ಪ್ರೀತಿ ಇಲ್ಲದ ಮೇಲೆ ಬೇಡದ ಜೀವನ.
 
                    - ಅನಿತ ಬಿ ಎಸ್