ನಾನು ಒಂದು ವರ್ಷದ ಹಿಂದೆ ರಾಜಸ್ಥಾನದ ಚಿತ್ತೋಡ್ ಗಡಕ್ಕೆ ಪ್ರವಾಸದ ನಿಮಿತ್ತ ಭೇಟಿಯಿತ್ತಾಗ ಒಂದು ವಿಚಾರ ನನ್ನನ್ನು ಆಕರ್ಷಿಸಿ ಆಸಕ್ತಿ ಮೂಡಿಸಿತು. ಅದಕ್ಕೂ ಮೊದಲು ಚಿತ್ತೋಡಗಡ ಬಗ್ಗೆ ___LINK_OPEN_href="http://en.wikipedia.org/wiki/Chittaurgarh" target="_blank"___ವಿಕಿಪಿಡಿಯಾದಲ್ಲಿ ನೋಡಿ ...

ಚಿತ್ತೋಡಗಡ ರಾಜ ಮಹಾರಾಜರ ನಾಡು, ವೀರಾಗ್ರಣಿಗಳ ತವರೂರು. ಈ ಊರಿನ ಅರ್ಧ ಭಾಗ ಗುಡ್ಡದ ಮೇಲಿರುವ ಕೋಟೆ ಆಕ್ರಮಿಸಿಕೊಂಡಿದೆ. ಈ ಊರಿಗೆ ಆಗಮಿಸಿತ್ತಿದ್ದಂತೆ ಇದೊಂದು ಐತಿಹಾಸಿಕ ಊರೆಂದು ನಿಮ್ಮ ಗಮನಕ್ಕೆ ಬಂದರೆ ಆಶ್ಚರ್ಯವೇನಿಲ್ಲ (ಇದು ಒಂದು ದೃಷ್ಟಿಯಲ್ಲಿ ನಮ್ಮ ಚಿತ್ರದುರ್ಗದಂತೆ). ಇಡೀ ಕೋಟೆಯನ್ನು ವಿವರವಾಗಿ ಸುತ್ತಿಕೊಂಡು ಬರಲು ೩-೪ ದಿನಗಳೇ ಬೇಕು.

ಇನ್ನು ವಿಷಯಕ್ಕೆ ಬರೋಣ.  ಕೋಟೆಯ ಒಳಗಿರುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು "ಗೋಮುಖ ಕುಂಡ". ಅದರ ಪಕ್ಕದಲ್ಲೆ ಪಾರ್ಶ್ವನಾಥ ಜೈನ ಮಂದಿರವಿದೆ. ಮಂದಿರದಲ್ಲಿರುವ ಪವಿತ್ರವಾದ ಜೈನ ಮೂರ್ತಿಯ ಮೇಲೆ "ಕನ್ನಡ"ದ ಲಿಪಿಯುಳ್ಳ ಕೆತ್ತನೆಯಿದೆ. ಪ್ರವಾಸಿ ಕಿರುಹೊತ್ತಿಗೆಯ(tourist guide) ಪ್ರಕಾರ ಇತಿಹಾಸಕಾರರು ಈ ಮೂರ್ತಿಯನ್ನು ಕರ್ನಾಟಕದಿಂದ ತಂದಿರ(ತರಿಸಿರ)ಬಹುದೆಂದು ಅಭಿಪ್ರಾಯಪಡುತ್ತಾರೆ.                                                           

      ಅಂದರೆ ಕರ್ನಾಟಕದ ಶಿಲ್ಪಕಲೆಯ ವೈಭವ, ಖ್ಯಾತಿ ದೂರದ ರಾಜಸ್ಥಾನದ ವರೆಗೆ ಹಬ್ಬಿತ್ತೆಂದು ತಿಳಿದು ನನಗೆ ಇನ್ನಿಲ್ಲದಷ್ಟು ಆಶ್ಚರ್ಯ ಸಂತೋಷಗಳೆರಡೂ ಆಯಿತು. ಈ ಹಿಂದೆ ___LINK_OPEN_href="/blog/24/01/2007/2963" target="_blank"___ಕರ್ನಾಟಕದ ಶಿಲ್ಪಕಲೆ ಶೈಲಿಯ, ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆದಿತ್ತು.             

-ಜೈ ಕರ್ನಾಟಕ.