ಜಗವೆಲ್ಲ ತುಂಬಿಹುದು
ಗುತ್ತಿಗೆ-ವ್ಯವಹಾರ,
ಭಾವ ಶೂನ್ಯದ ಮನದಿ
ಎಲ್ಲವೂ ವ್ಯವಹಾರ.

ಮದುವೆ ಬಂಧದ ದಿನದಿ
ಬಾಗಿಲಲಿ ನಿಂತು
ಭಾವವಿಲ್ಲದ ಮಂದಿ
ನಗುವ, ನಗುವೂ ಮಾರಾಟ.

ಭವ ಬಂಧನವ ತೊರೆದು
ಸತ್ತವನ  ಮನೆ ಮುಂದೆ
ವೇದನೆ ಇಲ್ಲದ ಮಂದಿ
ಅಳುವ, ಅಳುವೂ ಮಾರಾಟ.