
ಊಟಕ್ಕೆ ಮಾಡುವಿ ಏನನ್ನು
ನೀವೇನು ಹೇಳ್ತೀರೋ ಅದನ್ನು
ಅನ್ನ ಸಾಂಬಾರ್ ಮಾಡ್ರಿ
ಮಕ್ಕಳು ತಿನ್ನಲ್ಲ ಬಿಡ್ರೀ
ಮೊಸರನ್ನ ಇರಲಿ
ಮೊಸ್ರಿಲ್ಲ ಮನೇಲಿ
ಪೂರಿ ಕಡಲೆ ಗಸಿ
ಹೇವಿ ಬಿಡಿ ಜಾಸ್ತಿ
ಬೆಳ್ಳುಳ್ಳಿ ಚಟ್ನಿ ಅನ್ನ
ಶುಕ್ರವಾರಕ್ಕೆ ಮುನ್ನ?
ಮಸಾಲಾ ದೋಸೆ?
ರಾತ್ರೆಗಾ ಈ ಆಸೆ?
ಹೊರಗಿಂದ ತಂದ್ರೆ?
ಹೊಟ್ಟೆಗೇ ತೊಂದ್ರೆ
ತೊವ್ವೆ ಅನ್ನ ನಲ್ಲೇ?
ನಿನ್ನೆ ಮಾಡಿದ್ದೆನಲ್ಲ
ಹಾಗಾದರೆ ಪಾಸ್ತಾ
ಊಟವಾ ಪಾಸ್ತಾ ?
ಅವಲಕ್ಕಿ ಇಲ್ವಾ ಉಪ್ಪಿಟ್ಟು
ಬೇರೇನಿಲ್ವಾ ಇದ್ಬಿಟ್ಟು
ಬಿಸಿ ಬೇಳೆ ಬಾತು ಮತ್ತೆ
ತುಂಬಾನೇ ಸಮಯ ಹಿಡಿಸುತ್ತೆ
ಊಟಕ್ಕೆ ಮಾಡುವಿ ಏನನ್ನು
ನೀವೇನು ಹೇಳ್ತೀರೋ ಅದನ್ನು
ಚಿತ್ರ ಕ್ರಪೆ: ಅಂತರ್ ಜಾಲ
ಪ್ರತಿಕ್ರಿಯೆ (12)