.ಜಗತ್ತು-ವಿಸ್ಮಯ.
ಬಾನಲಿ ಮೂಡಿದ
ಅಂದದ ಚುಕ್ಕೆಗ-
ಳೆಣಿಸುವರಾರೀ ಜಗದೊಳಗೆ
ಬೆಳಕನು ನೀಡುವ
ಆರ್ಕನ ಕಿರಣವ-
ನಳೆಯುವರಾರೀ ಜಗದೊಳಗೆ
ಹನಿಯುವ ಮಳೆಯಾ
ಹನಿಗಳ ಲೆಕ್ಕವ-
ಗುಣಿಸುವರಾರೀ ಜಗದೊಳಗೆ
ಹಾಗೆಯೇ
ಮನದಲಿ ಮೂಡಿದ
ಪ್ರೀತಿಯ ಆಳವ-
ನಳೆಯುವರಾರೀ ಜಗದೊಳಗೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!