ಚಿಟ ಪಟ ಮಳೆ ಹನಿಗೆ
ಭೂಮಿಯ ಮುದ್ದಿಸುವಾಸೆ
ಹುಣ್ಣಿಮೆ ಚಂದ್ರಗೆ
ಬೆಳದಿಂಗಳ ನೀಡುವಾಸೆ
ಹರಿಯುವ ನದಿಗೆ 
ಕಡಲ ಸೇರುವಾಸೆ


ಹಾರಾಡೋ ದುಂಬಿಗೆ
ಹೂವ ಮಕರಂದವ ಹೀರುವಾಸೆ
ಬೀಸೋ ಗಾಳಿಗೆ
ತಂಪನು ನೀಡುವಾಸೆ
ನನ್ನೀ ಮನಕೆ
ನಿನ್ನ ಪ್ರೀತಿಸುವ ಆಸೆ..!!