ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ?
ಕಾಮೆಂಟು, ಲೈಕು ಕುಕ್ಕೋದ್ರಲ್ಲೇನೈತೆ
ಸೃಜನಶೀಲತೆ ತೋರಲೇನು ಕೊರತೆ?
ಬತ್ತಿತೇ ನಿನ್ನಯ ಭಾವನೆಯ ಒರತೆ?
ಎಂದು ಕೇಳಿದೆ ಒಮ್ಮೆ ನನ್ನ ಮನವ..|1|
ಕಾಡ್ತೋಟದಲ್ಲಿ ಉರುಳಿದ್ದ ಫಲ ನಾನು
ನೀ ಹೆಕ್ಕದೇ ಬಿಟ್ಟ ತಾಂಬೂಲ ನಾನು
ಸುತ್ತ ಕಳೆ ಬೆಳೆಯಲು ತಲೆಯೆತ್ತಿ ನಿಂತೆ
ಇನ್ನರ್ಧ ಅಡಿಯಲೇ ನೀ ಕಾಣ್ವೆಯೆಂಬಂತೆ|2|
ನಿಡಿದಾಗಿ, ಇಡಿಯಾಗಿ ನಾ ತುಂಬಿ ಬೆಳೆದೆ
ಹಾರೋ ದಣಿದಕ್ಕಿಗಳ ಕುಳ್ಳಿರಿಸೆ ಕರೆದೆ
ಹೂವಾಗಿ, ಫಲವಾಗಿ ಬಾಲ್ಯ ರೂಪವೇ ಆದೆ.
ನೀನಿಂದು ಹೊಗಳುವ ಸಿಹಿನೀರ ಪಂಪಾದೆ|3|
ಮರಿಯಳಿಲು ಬಳಿ ಬಂತು ನಾನೂ ಆಡಲೇ ಅಂತು
ಹಾರೋ ಮಂಗವು ಬಂತು , ಸಿಹಿನೀರು ಬೇಕಂತು
ಪ್ರತಿದಿನಾ ಕೊರೆದ ದುಂಬಿ ನಿನ್ನೆನಪೇ ತಂತು
ಎಷ್ಟೋ ವರುಷದ ಬಳಿಕ ನೀ ಹೊಗಳೋ ತಾಂಬೂಲ
ಬಣ್ಣ ಬೇರೆಯದಾದ್ರೂ ನಂದೇ ಅಂಶದ ಫಲ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!