ನಲ್ಮೆಯ ಗೆಳತಿ ನೀತಾ,
ಪ್ರೀತಿಯ ಗೆಳೆಯ ಪ್ರದೀಪ

ಎಂಬೊಕ್ಕಣೆಯನ್ನಾತುಕೊಂಡ

ನೆನಪೊರುವ ಬುಕ್ಕೆ ಸ್ಲಾಂ ಬುಕ್

ಸ್ನೇಹದ ತೋಟದಿ ಅರಿಯದೆ ಅರಳಿದ

ಸೊಬಗನು ನಂಬಿಕೆ ದಾರದಿ ಕಟ್ಟಿದ

ಹೂಗಳ ಬೊಕ್ಕೆ ಸ್ಲಾಂಬುಕ್|1|

ಬಣ್ಣದಕ್ಷರದಿ ಭಾವನೆ ಬಣ್ಣಿಸೋ

ಬೇರ್ಪಡುವ ದಿನದ ನೋವ ನೆನಪಿಸೋ

ಕಾಲಪ್ರವಾಹದಿ ಕೊಚ್ಚಿ ಹೋದವರ

ದಡಮುಟ್ಟಿದವರೆಂದೋ ನೆನೆಯಲು

ಗೆಳೆಯರಿಗೊಳಿದ ದಾರಿ ಸ್ಲಾಂ ಬುಕ್|2|

ಬರಿಯೆಂದು ಬುಕ್ಕು ಕೊಟ್ಟ ಅರೆಕ್ಷಣ

ಬರಿಯುವದೇನಂದರಿಯದೆ ತಲ್ಲಣ

ಹೀಗೆ ಕೂತವರದೆ ಹಲವೆಡೆ ಚಿತ್ರಣ

ಕೈಗೆ ಸಿಗದಾರೋ ಕೋತಿಯ ಕೂರಿಸಿ

ತುಂಬೋ ಸವಿನೆನಪಿಗಿದೇ ಅಂಕಣ

ಸ್ನೇಹವ ಸೂಸೋ ಸ್ಲಾಂಬುಕ್