"ಅಮೃತ" ಎಂದರೆ ಅಮ್ಮನ ಪ್ರೀತಿ,

"ಅಮ್ಮ" ಎನ್ನುವುದೇ ಕಂದನ ಸೂಕ್ತಿ.

 

ಅಮ್ಮನ ನಿಸ್ವಾರ್ಠ ಪ್ರೀತಿಯ ಬಣ್ಣಿಸಲಸಾಧ್ಯ

ಆಕೆಯಲಿ ದೇವರ ಕಾಣುವುದೇ ಸೌಭಾಗ್ಯ.

 

"ತಾಯಿಗಿಂತ ಮಿಗಿಲಾದ ದೇವರಿಲ್ಲ" ಈ ಮಾತು ಸತ್ಯ.

ಮಾತೆಯ ಮಮತೆಯ ಮುಂದೆ ಎಲ್ಲವೂ   ಮಿಥ್ಯ.

ತಾನು ನೋವುಂಡು ತನ್ನ ಕುಡಿಗೆ ಜೀವನೀವಳು ಈ " ಜನನಿ",

ಮಕ್ಕಳ  ಯೋಗ  ಕ್ಷೇಮವ ಸದಾ ಬಯಸುವ "ಸಾಧ್ವೀಮಣಿ".

 

 ಬೆಲೆ  ಕಟ್ಟಲಾಗದ ವಜ್ರ ಅಮ್ಮನ ' ಪ್ರೀತಿ',

ತಿಳಿದೋ ತಿಳಿಯದೆಯೋ ಜವಾಬ್ದಾರಿ ಮರೆತು 

ಕಡೆಗಣಿಸುತಿದೆ  ಸಮಾಜ ಈ 'ನೀತಿ'.

 

ಗುಡಿಯ ದೇವರಿಗೆ ಸೇವೆ ಸಲ್ಲಿಸುವರು ಜನರು,

ಮನೆಯಲ್ಲಿರುವ ತಾಯಿ ದೇವರ ಮರೆತಂತಿಹರು ಇಂದು ಹಲವರು.

 

ಪ್ರೀತಿ-ಮಮತೆ, ಸಹನೆ-ಸೌಹಾರ್ದ ಗಳ 

ಸಾಕಾರ ಮೂರ್ತಿ ಅಮ್ಮನ ಪಾದಕೆ ಸದಾ ನಮಿಸುವೆ,

 

ಮರುಜನ್ಮವಿದ್ದಲ್ಲಿ

ಮಗದೊಮ್ಮೆ ಮಗುವಾಗಿ

ಇದೇ ಅಮ್ಮನ ಮಡಿಲಲಿ

ನಲಿಯುವ ವರವನ್ನು ಕರುಣಿಸೆಂದು ಸದಾ ಬೇಡುವೆ.