___LINK_OPEN_rel="lightbox[roadtrip]" title="ಪ್ರೀತಿ ಎಂಬ ಕಡಲು " href="http://wallinside.com/images.php?max_width=610&imgfile=fotos/1314178833images%20(1).jpg"___ಪ್ರೀತಿ ಎಂಬ ಕಡಲು
 

ಪ್ರೀತಿ ಎಂಬುದೊಂದು ಕಡಲು 
ಬಿದ್ದಿದ್ದೆ ಬಾರದೆ ಈಜಲು 
ಹವಣಿಸಿದ್ದೆ ದಡ ಮುಟ್ಟಲು 
ಪಡೆದಿದ್ದೆ ನಿನ್ನ ಹೆಗಲು 
 
ನಮ್ಮ ಪ್ರೀತಿಯ ಪಯಣ 
ಮಾಡಿತ್ತು ಒಲುಮೆಯ ನರ್ತನ 
ಹೀಗೆ ಇರಲೆಂದಿತು ಮನ 
ಉಳಿಸಿಕೊಂಡರೆ ಜನ್ಮ ಪಾವನ
 
ಶುರುವಾದದ್ದು ಸ್ನೇಹದಿಂದ 
ಮುಗಿಯದಿರಲಿ ಮದುವೆಯಿಂದ 
ವರ ಬೇಡಿಹೆನು ದೇವರಿಂದ 
ಹಾರೈಸಿರಿ ಒಮ್ಮನಸಿನಿಂದ