ಕೆಲಸ - ಮನಸ್ಸು !

 

ಇಷ್ಟದ ಕೆಲಸ, ಕಷ್ಟವಾದರೂ ಮನಸಿಗೆ ತಿಳಿಯದು ಕಷ್ಟ !

ಒಲ್ಲದ ಕೆಲಸ, ಸುಲಭವಾದರೂ ಮನಸಿಗೆ ಕಾಣುವ ಕಷ್ಟ !

 

ಇಷ್ಟವೆಂಬ ಶಕ್ತಿ , ಮನಸ್ಸಿನಲ್ಲಿ ಭಕ್ತಿ - ಹಾಯೆನಿಸುವುದು ಆಯಾಸ !

ಕಷ್ಟವೆಂಬ ಮನಸ್ಥಿತಿ, ಮುದುಡಿದ ಮನಸ್ಸು - ಸಾಕೆನಿಸುವುದು ಆಯಾಸ !

 

ಕಾಯಕವೇ ಕೈಲಾಸವೆಂದ" ಹಿರಿಯರು ! ! ಕೈಲಾಗದು ಎನ್ನುವ ನಾವುಗಳು 

ಇಷ್ಟ - ಕಷ್ಟಗಳು ಕೆಲಸದ ಗುಣಗಳಲ್ಲ, ಮನಸ್ಸಿನ ಸ್ಥಿತಿಗಳು !
"ಮನಸ್ಸಿದ್ದಲ್ಲಿ ಮಾರ್ಗ" ವೆಂಬುದ ನೆನೆದು ನಡೆ ಮುಂದೆ. ನಡೆ ಮುಂದೆ !

 

                                                        - ನಂದೀಶ್ ಬಸವರಾಜು