ನಮ್ಮ ಗಣಪತಿ
ಸೊಭಗಿನಿಂದ ಬಂದ ನೋಡು ನಮ್ಮ ಗಣಪತಿ
ಬಲು ಪ್ರಭಾವ ಉಳ್ಳ ಭೀಮ ದೇಹದಾಕೃತಿ ||
ಲಲಿತ ನಳಿತ ಬಲಸಮ್ಮಿಳಿತ ಕಡು ಪರಾಕ್ರಮಿ
ಸುಪ್ತ ಗುಪ್ತ ಆಪ್ತನು ಪ್ರದೀಪ್ತ ಗುಣನಿಧಿ ||
ಇವನು ಶಿವನಭವೆಯ ಕುವರನಾದ ಗಜಮುಖ
ಆದಿ ಗಾದಿಗೆ ಸಾಧಿಸಿದ ಮಹಾತ್ಮ ಜಗಸಖ ||
ಬೇಧವಿಲ್ಲದೀತ ಮೊದಲ ಪೂಜೆಗೊಳ್ಳುವ
ಒಲಿದು ನಲಿದು ಸೆಳೆದು ದೋಷ ದೂರ ತಳ್ಳುವ ||
- ಸದಾನಂದ
ಪ್ರತಿಕ್ರಿಯೆ (3)