ಕರವ ಮುಗಿದು ಬೇಡುವೆನು
ಶಿರವಬಾಗಿ ನಮಿಸುವೆನು
ವರವ ನೀಡು ಗಣಪನೆ
ನಂಬಿರುವೆ ನಾ ನಿನ್ನನೆ . . .
ತಟ್ಟೆ ತುಂಬಾ . . .ಇಟ್ಟಿರುವೆ
ಉಂಡೆ ಕಡುಬು ಮೋದಕ
ಆರಿಸಿ ತಂದಿಹೆ ಗರಿಕೆಯನು
ಹಾಡುತಿರುವೆ ನಿನ್ನ ಮಹಿಮೆಯನು . . .
ಕಾಡುತಿರುವ ನೋವುಗಳನು
ತಾಳಲಾರೆ ನಾ . . .ದೇವನೇ . . .
ಕತ್ತಲಾದ ಬದುಕಿನಲ್ಲಿ
ಬೆಳಕ ಚೆಲ್ಲು ಗಣಪನೆ . . .!
ಪ್ರತಿಕ್ರಿಯೆ (2)