ಒಲೆಯ ನೋಡಿರಿದು

ಸುಡು ಸುಡು ಸುಡುವ

ದೇಹವೆಂಬ ಒಲೆ,

ಕಾಮಾಗ್ನಿ ಕ್ರೋದಾಗ್ನಿ,

ಮೋಹ ಮದಾಗ್ನಿ

ಹತ್ತಿ  ಉರಿಎದ್ದು

ಬಗ ಬಗನೆ ಉರಿವ ಒಲೆ,

ಒಂದೊಮ್ಮೆ ಆರಿದರೆ

ಊದಿ ಕೆದಕಿದರೂ

ಮತ್ತೆ ಹತ್ತಿಸಲಾಗದ ಒಲೆ.