ಮಾತೆಯ ಮಮತೆಯಾ ಮರೆಯಲೆಂಗ

ಮುದ್ದು ಅಮ್ಮಾ ಎಲ್ಲಿರುವೆ

ನಿನಗಾಗಿ ನಾ ಕಾದಿರುವೆ

ನನ್ನ ಮನದಾಳದಾ ಮಾತು ನಿನಗೆ ಕೇಳದೇ?

ನೀನಿಲ್ಲದೆ ಈ ಮನಸ್ಸಿಗೆ ನೆಮ್ಮದಿಯೆಲ್ಲಿದೆ?

ಒಂಭತ್ತು ತಿಂಗಳು ಗರ್ಭಗೂಡಿನಲ್ಲಿಟ್ಟು ಕಾಪಾಡಿದೆ

ನೀನೇಕೆ ನನ್ನ ಬಿಟ್ಟು ಹೋದೆ?

ನೀನಿಲ್ಲದಾ ಬದುಕು ನರಕ ಸದೃಶವಾಗಿದೆ

ದೇವರಿಗೆ ನನ್ನ ಮೇಲೆ ಕರುಣೆ ಬಾರದೆ?

ನೀ ಕೊಟ್ಟ ಪ್ರೀತಿಯಾ ನಾ ಕಾಣೆನಮ್ಮಾ

ನನ್ನ ಹಣೆಗಿಟ್ಟ ಮುತ್ತನು ನಾ ಮರೆಯನಮ್ಮಾ

ನಿನ್ನ ಮಡಿಲಲಿ ಮತ್ತೊಮ್ಮೆ ಸೇರಬಯಸುವೆನಮ್ಮಾ

ಮತ್ತೊಮ್ಮೆ ಮಗದೊಮ್ಮೆ ದೇವರಲಿ ಪ್ರಾರ್ಥಿಸುವೆ

ಮರಳಿಸು ಆ ನನ್ನ ಮುದ್ದು ಅಮ್ಮನಾ

ಕರುಣಿಸು ಅವಳಾ ಪ್ರೀತಿ ಧಾರೆಯಾ

ಅಮ್ಮನ ನೆನಪಿನಲಿ ಈ ಪುಟ್ಟ ಕವನ........................