ಬಾಲ್ಯದಾ ಆ ದಿನಗಳು
ಸವಿ ಸವಿ ನೆನಪು ಸಾವಿರ ನೆನಪು
ಬಾಲ್ಯದ ದಿನಗಳ ಆ ಸಿಹಿ ನೆನಪು
ಅಮ್ಮನ ಮಡಿಲಲಿ ಆಡಿದ್ ನೆನಪು
ಅವಳಿಟ್ಟಾ ಸಿಹಿ ಮುತ್ತಿನ ನೆನಪು
ಛಳಿಯಲಿ ಮಿಂದ ಬಿಸಿನೀರಿನ ನೆನಪು
ಸೂರ್ಯೋದಯದಾ ಸ್ನಾನದ ನೆನಪು
ದೇವರ ಎದುರಿನ ಪ್ರಾರ್ಥನೆ ನೆನಪು
ಅಮ್ಮನು ಕೊಟ್ಟ ಉಂಡೆಯ ನೆನಪು
ಹೊಸ ಹೊಸ ಬಟ್ಟೆಯ ಹಾಕಿ ಗೆಳೆಯರೊಂದಿಗೆ ಆಡಿದ ನೆನಪು
ಮನದಾಳದಿ ಮರಳಿವೆ ಚೆಂದದ ನೆನಪು
ಹಸಿರಾಗಿ ಉಳಿದಿವೆ ಆ ಬಾಲ್ಯದ ನೆನಪು
ಹಸಿರಾಗಿ ಉಳಿದಿವೆ ಆ ಬಾಲ್ಯದ ನೆನಪು
ಪ್ರತಿಕ್ರಿಯೆ (1)