ಮಾಡರ್ನ ಲವ್

ಆಧುನಿಕ ಪ್ರೀತಿಯಡೆಗೆ ಕನ್ನಾಡಿಸಿದಾಗ ಪ್ರೇಮಿಗಳ ನಡುವಿನ ಸಂಭಾಷನೆಯ ಒಂದು ಜ್ಹಲಕ್ ನನ್ನ ಮನದಾಳದ ಮಾತುಗಳಲ್ಲಿ ಬ೦ದ ಬಗೆ   ಹೀಗಿದ.

 ಹುಡುಗಿ -       

      ಹುಡುಗಾ ಏ ಹುಡುಗಾ

      ಹತ್ತು ನನ್ನ ಪ್ರೀತಿಯ ಹಡಗಾ

     ತೊಡಿಸು ನನ್ನ ಕೈಗೆ ಬಂಗಾರದಾ ಕಡಗಾ

     ಇಲ್ಲದಿದ್ದರೆ ನೀ ಕೇಳಬೇಕಾದೀತು ನನ್ನ ಕೋಪದಾ ಗುಡುಗಾ

ಹುಡುಗಾ - 

      ಗೆಳತಿ ಓ ಗೆಳತಿ

      ನನ್ನ್ಯಾಕ  ಹೀಂಗ ಕಾಡತಿ

     ನನ್ನ ಮೇಲೇಕೆ ಗುಡುಗತಿ

    ನಿಜ ಹೇಳುವೆ ನನ್ನ ಬಳಿ ಇಲ್ಲಾ ನಿನ್ನ ಕೈ ಬಳೆಯ ಅಳತಿ

ಹುಡುಗಿ - 

     ಇಲ್ಲಂತ ಹೇಳತಿ ನನ್ನ ಬಳೆಯ ಅಳತಿ

     ಹತ್ತಿರ ಬಂದಾಗ ಮುಂಗೈಯ ಹಿಡಿಯತಿ

     ಆಗ ತಿಳಿಯಲಿಲ್ಲವೆ ನನ್ನ ಬಳೆಯ ಅಳತಿ?

     ನಿನ್ನ ಪ್ರೀತಿ ಬರೀ ಸುಳಿಳಿನ ಸಂತಿ

ಹುಡುಗ -

      ನನ್ನ ಪ್ರೀತಿಗೆ ನೀನಂದೆ ಸುಳಿಳಿನ  ಸಂತೆ

      ನೀ ಬಯಸಿದ್ದು ನನ್ನ ಹತ್ತಿರ ಬರೀ ನೋಟಿನ ಕಂತೆ

       ನಿಜ ಪ್ರೀತಿಗೆ ಈ ಜಗದಲ್ಲಿ ಬೆಲೆ ಇಲ್ಲವಂತೆ

       ಇರಲಿ ಬಿಡು, ಇರಲಿ ಬಿಡು ನೀ ದೂರಾದರು ಅವಳಿರುವಳಂತೆ