ನನ್ನವನ ಮೀಸೇ

ನನ್ನವನಾ ಮೀಸೇ

ಜಗ್ಗಬೇಡಾ ಕೂಸೇ

ಜಗ್ಗಿದರೆ ನೀನು

 ಕಿತ್ತು ಬರದೇನು

ಕಿತ್ತರವನಾ ಮೀಸೇ

ಮುರಿದೀತು ನನ್ನ  ಆಸೆ

 ಮೀಸೇಯಿಂದಾ ಚಂದಾ

ಅವನಾ ಮುಖದಾ ಅಂದಾ

ಮೀಸೆ ಇಲ್ದಾ ಗಂಡು

ಹವಾ ಹೋದಾ ಚಂಡು

ಕನ್ನಡದಾ ಗಂಡ

ಮೀಸೇಯ ಕಂಡ

ಕೊಟ್ಟೇನಿ ಮನಸಾ

ಮದುವೆಯ ಮಾಡಿಸಾ

                          

                         ನಿಮ್ಮ ಸುಮಂಗಲಾ