ನೀನ್ಯಾರಿಗಾದೋ ಎಲೇ   ಮಾನವಾ

ಆಕಾಶದನ್ ಹಕ್ಕಿ

ಹೊತಗೊಂಡ್  ಬಣ್ಣದ್ ರೆಕ್ಕಿ

ನೆಲಾ ಎಲ್ಲಾ ಹೆಕ್ಕಿ

ಹುಳುಗೋಳ ತಿಂತಾವ್ ಕುಕ್ಕಿ

 

ರೈತಂಗಾದೆ ಗೆಳೆಯಾ

ತಾರೋ ಒಂಚೂರು ಮಳೆಯಾ

ಬರಿಸೊ ಒಳೆಳ ಬೆಳೆಯಾ

ಕಿತ್ತೇವೆಲ್ಲಾ ಕಳೆಯಾ

 

ಎಷ್ಟು  ದೊಡ್ಡ ಕಾಡು

ಮಾಡಿದೆಲ್ಲಾ ನಾಡು

ಕಳ್ದಹೋಯ್ತ ನಮ್ಮ ಹಾಡು

ಘೋರವಾಯ್ತು ನಮ್ಮ ಪಾಡು

 

ಹಿತ್ತಲ್ದಾಗ್ ಐತಿ ಗಿಡಾ

ಕಟ್ಟತೀನೊಂದು ಗೂಡಾ

ಅಲ್ಲಿ ನೆಲೆ ಹೂಡಾ

ಹಾಡು ಸುಂದರ ಹಾಡಾ

 

ಮಾನವಾ ನೀನು ದ್ರೋಹಿ

ನಿನ್ನೊಂದಿಗಾಗೋಲ್ಲಾ ಸ್ನೇಹಿ

ನೀನೊಬ್ಬ ದೊಡ್ಡ ಮೋಹಿ

ನಿನ್ನ ಮನಸ್ಸೆಲ್ಲಾ ಬರೀ ಕಹಿ

 

 

                                 ನಿಮ್ಮ ಹುಡುಗಿ ಸುಮ೦ಗಲಾ