ಉಪವಾಸ
ಉಪನಯನ ಉಪದೇಶ ಉಪನಿಷತಿನಂತೆ
ಉಪವಾಸವೆನ್ನುವುದು ಬಲು ಶ್ರೇಷ್ಠವಂತೆ
ಹಾಗಂತ ಹೇಳಿಹುದು ಅನುಭವದ ಮಾತು
ಹೇಗಂತ ತಿಳಿಯುವುದು ಉಪವಾಸ ಕೂತು
ಅಂದಣ್ಣ ಉಪವಾಸ ಮಾಡಿದುದ ನೋಡಿ
ಇಂದಿಂದ ಅದಕೆಂದು ಕುಳಿತಿಹರು ಮೋದಿ
ತರಬೇಕು ಸದ್ಭಾವ ಗುಜರಾತಿಗೆಂದು
ಬರಬೇಕು ಬಿ.ಜೆ.ಪಿ. ಅಧಿಕಾರಕೆಂದು
- ಸದಾನಂದ
ಪ್ರತಿಕ್ರಿಯೆ (4)