ಅರಿವಾಸೆಯೆ ದಾರಿಯು
ಸಾಧಕನ ಬದುಕಿಗೆ,
ಮುಂದಿರಲು ಗುರಿಯು,
ಹಿಂದೆ ಗುರು ಬೆಂಬಲವು.

ಹಾದಿಯಲಿ ನಿಚ್ಚಯವು
ಎಡಬಿಡದ ಶೋಧನ.
ಸಾಧಿಸಲು ಅಚಲತನ
ಮನದಿರಲಿ ವ್ಯವದಾನ.

ನಡೆವಾಗ ಬರಲೇನು?
ಸಮ್ಮಾನ, ಅವಮಾನ,
ಸಮಸ್ಥಿತಿಯೆ ಸುಮನ.
ಏರಿಳಿತ ಬಂಧನ.

ಅಂತೆಯೆ ಸಾಗಲದು,
ಗುರಿಯೆಡೆಗೆ ಸೇರಲು.
ಶಿಶಿರವದು ಶೂನ್ಯವು.
ಅಹಮಿಕೆಯು ಅಳಿಯಲು.

ಅಳಿದಾಗ ಉಳಿವುದೇನ್?,
ಏನಿಲ್ಲದಾ ಕೊನೆಯೇನ್?,
ಯಾರದದು? ಸಾಧನೆಯೆನೆ,
ಸೇರಿದಾಗುರಿಗೆ  ಅರ್ಥವೇನ್?.