ಹೃದಯದಾ ಪ್ರೀತಿಯಾ ಹೇಳಲೆಂತು ಗೆಳೆಯಾ

ವಿರಹದಾ ನೋವಾ ತಾಳಲೆಂತು ಇನಿಯಾ

 

ನೀನಿರದಾ ದಿನಗಳು

ಕಣ್ಣೀರಿನಾ ಹನಿಗಳು

ನನ್ನ ಕಂಬನಿಯೊಂದಿಗೊಡಗೂಡಿ

ಕಂಬನಿಯಿಡುತಿವೆ ಆ ಲತೆಗಳು

ಏನೆಂದು ಹೇಳಲಿ ಆ ಲತೆಯ ವ್ಯಥೆಯಾ

 

ಹಸಿರಾದ ಬಳಿಳಿಗೆ

ಉಸಿರುಗಟ್ಟಿದ ಹಾಗೆ

ತಾಳಲೆಂತು ನಾ ಈ ವಿರಹ ಬೇಗೆ

ಉಸಿರಾದ ಗೆಳೆಯಾ ಹೋದೆ ನೀ ಎಲ್ಲಿಗೆ

 

ಆ ರವಿಯ ಬೆಳಕಿನಲಿ ಬೆಳಗುತಿಹ ಕಂಬನಿ

ಸಾಲುಗಳ ತನಿಸುವೆಯಾ ಬಂದು ನೀ

 

ಬಾಡಿರುವ ಮೊಗಸಿರಿಗೆ ಜೀವಕಳೆ ತರಲೆಂದು

ನಿಲ್ಲಬಾರದೆ ಗೆಳೆಯಾ ನನ್ನೆದಿರು ಬಂದು

ಕಾದಿರುವೆ ನಿನಗಾಗಿ ಕಂಬನಿಯ ಮಿಡಿಯುತ್ತಾ

ಕಂಬನಿಯನೊರೆಸಲು ನೀ ಬರುವೆ ಎಂದು