ನಾಗರ ಜಡೆಯಾಕೆ

ಕೈಯನು ಹಿಡಿಯೋಕೆ

ಬರುತಾಳೆ ಶ್ರಾವಣ ಮಾಸಕೆ

ಬರುತಾಳೆ ಶ್ರಾವಣ ಮಾಸಕೆ ನನ್ನವಳು

ಜೀವನದ ಜೋಳವ ಬೀಸೋಕೆ

 

ಬಟ್ಟಲಗಣ್ಣವಳು

ಬಲುಚಂದ ನನ್ನವಳು

ಪ್ರೀತೀಯ ಬಾಣವ ಬಿಟ್ಟವಳು

ಪ್ರೀತೀಯ ಬಾಣವ ಬಿಟ್ಟವಳು ನನ್ನವಳು

ಎದೆಯಾಗೆ ಜೋರಾಗಿ ನೆಟ್ಟವಳು

 

ಕಗ್ಗತಲ ಬೆಳಕಾಗಿ

ಕಂಗಳಿಗೆ ಹೊಳಪಾಗಿ

ಬಾಡಿದ ತೋಟಕೆ ಸುಮವಾಗಿ

ಬಾಡಿದ ತೋಟಕೆ ಸುಮವಾಗಿ ನನ್ನವಳು 

ಬಂದಾಳ ನನ ಬಾಳ್ಗೆ ಸುಧೆಯಾಗಿ 

                                           ನಿಮ್ಮ ಸುಮಂಗಲಾ