ಮಣ್ಣೀನ ಬಿಂದೀಗೆ

ತಂದೇನ ಸಂತೀಗೆ

ಮಾರಾಕ ಎಂದು ಮಂದೀಗೆ

ಮಾರಾಕ ಎಂದು ಮಂದೀಗೆ ತಂದೇನ

ಕೊಳಾಳಕ ಮನಸಿಲ್ಲಾ ಯಾರೀಗೆ

 

ನಿಲುವಂಗಿ ತೊಟಗೊಂಡು

ಜಿರಕೀಯ ಮೆಟಗೊಂಡು

ಬಂದಾನ ಪ್ಯಾಟೀಗೆ ಬಹದ್ದೂರ ಗಂಡು

ಬಂದಾನ ಪ್ಯಾಟೀಗೆ ಬಹದ್ದೂರ ಗಂಡಿವನು

ಪ್ರೀತೀಗೆ ಸೆರೆಯಾದ ನನಕಂಡು

 

ಬೆರಳೀನ ಸಂದ್ಯಾಗ ಧೋತರದ ಚುಂಗು

ತಲೆಯಾಗ ತುಂಬಕೊಂಡು ನನ್ನಯ ಗುಂಗು

ಹಾಕ್ಯಾನ ನನ ಮ್ಯಾಲೆ  ಪ್ರೀತೀಯ ರಂಗು

ಹಾಕ್ಯಾನ ನನ ಮ್ಯಾಲೆ ಪ್ರೀತೀಯ ರಂಗಿವನು

ತೊರೆದು ಜೊತೆ ಬಾ ಎಂದ ಎಲ್ಲಾರ ಹಂಗು

 

ಎರಡೆತ್ತಿನ ಚಕ್ಕಡಿ

ಹತ್ತೆಂದಾ ದಯಮಾಡಿ

ಕಷ್ಟಗಳ ಜಯಿಸೋಣ ಹೋರಾಡಿ

ಕಷ್ಟಗಳ ಜಯಿಸೋಣ ಹೋರಾಡಿ ಎಂದಾನ

ಹಕ್ಕಿಗಳ ಹಂಗ ಹಾರಾಡಿ

 

                                     ನಿಮ್ಮ ಹುಡುಗಿ ಸುಮಂಗಲಾ