ಎನ್ನೆದೆಯ ಕಡಲಲಿ

ನಾವೆಯಲಿ ನೀ ಬಂದೆ

ಪ್ರೀತೀಯ  ಹುಟ್ಟಿಡಿದು

ಸಾಗಿರುವೆ ನೀ ಮುಂದೆ

ನೀನೆಂತು ಬಲ್ಲೆ, ನೀನೆಂತು ಬಲ್ಲೆ

ಪ್ರೀತಿಯಲೆಗಳ ಬಿಟ್ಟು ಹೋಗುತಿಹೆ ಹಿಂದೆ

 

ಕೇಳದೇ ನಿನಗಿಂದು ಎನ್ನೆದೆಯಾ  ಒಳಲು

ಕೇಳೆನ್ನ ಮನದಂಬುಧಿಯಾ  ಅಳಲು

ನುಡಿಸುತಾ ನಿನ್ನಂತರಂಗದಾ ಕೊಳಲು

ಕಾಪಿಡೆನ್ನೊಡಲ  ಪ್ರೀತಿಯಾ ಹೊನಲು 

 

ಎನ್ನೆದೆಯಾ  ಚಿಪ್ಪಿನಲಿ ಸ್ವಾತೀಯಾ ಮುತ್ತಾಗಿ

ಬಚ್ಚಿಟ್ಟುಕೊೞುವೆನಾ  ನಿನ್ನೆನ್ನ ಸ್ವತ್ತಾಗಿ

ವಿರಹದಾ ವೇದನೆಯು ನನಗಿಂದು ಸಾಕಾಗಿ

ಬರಬಾರದೇ ಗೆಳೆಯಾ ಇರಬಾರದೇ ಗೆಳೆಯಾ

ನೀ ಎನ್ನ ಜೀವದಾ ಜೀವಾಳವಾಗಿ

 

 

 

                              ನಿಮ್ಮ ಸುಮಂಗಲಾ