ಹುಡುಗಿ ಹುಡುಗಿ ಹುಬ್ಬಳಿಳಿ ಹುಡುಗಿ
ಬಳಕು ಬಳಿಳಿಯಂತ ಬಿಂಕದ ಬೆಡಗಿ
ಮಾಡ್ತಾಳಂತ ರುಚಿ ರುಚಿ ಅಡಿಗಿ
ಅಜ್ಜ ಹೇಳ್ಯಾನೆ ಕುಣಿ ಕುಣಿಸಿ ಕೈಯಾನ ಬಡಿಗಿ
ಹೇಳ್ಯಾನ ಹೇಳ್ಯಾನ ನಮ್ಮಜ್ಜ ಸುದ್ದಿ
ಬರವಲ್ದ ಯಾಕ ಕಣ್ಣೀಗೆ ನಿದ್ದಿ
ಮನ್ಯಾಗೆಲ್ಲ ತುಂಬೈತಿ ನನ್ನಾಕಿ ಸುದ್ದಿ
ಅಕಿನ್ ನೆನಕೊಂತ ತಿಂದೇನಿ ಜೋಳದ ಮುದ್ದಿ
ಮನೀತನಕ ಹೋಗೆವ ನೋಡಾಕ ಹೆಣ್ಣ
ತಗೊಂಡು ಡಜನ್ನು ಬಾಳೆಯ ಹಣ್ಣು
ಕಪ್ಪಿನೊಳಗ ತಂದಾಳ ಕಣ್ಣನ್ ದೇವನ್ನು
ಏನ್ ಚೆಂದ್ ಅದಾವ್ರಿ ಅಕಿ ಬಟ್ಟಲಗಣ್ಣು
ಕಣ್ಣಾಗ ಕಣ್ಣಿಟ್ಟು ನೋಡ್ಯಾಳ ನನ್ನ
ಅವಳಾ ಆ ಮುಗುಳ್ನಗೆ ಎಲ್ಲಕ್ಕಿಂತ ಚೆನ್ನ
ಕರೀಮಚ್ಚೆ ತೋರ್ಸೈತಿ ಆಕಿ ಬಿಳಿ ಬೆನ್ನ
ಕಂಡಿಲ್ರಿ ಎಲ್ಲೆಲ್ಲೂ ಇಂಥ ಚೆಲುವೆಯನ್ನ
ಕಾರ್ತಿಕ ಮಾಸಕ್ಕ ಕಾಯ್ಕೊಂತ ಕುಂತೇನಿ
ಸಂಸಾರ ಜೀವನಕ ಕಾಲಿಡತೇನಿ
ಲಗ್ನ ಪತ್ರೀಕೆ ಚ್ಯಾಪ್ಸಾಕ ಹಾಕೇನಿ
ಲಗ್ನಕ್ಕ ನಿಮ್ಮನ್ನೆಲ್ಲಾ ಮರೀದ ಕರೀತೇನಿ
ನಿಮ್ಮ ಸುಮಂಗಲಾ
ಪ್ರತಿಕ್ರಿಯೆ (5)