ನಾನಾವ ಕಥೆಗೆ ನಾಯಕನೋ ಗೊತ್ತಿಲ್ಲ
ಕಥೆಯ ಹೆಣೆದವರು ಈಗ ಪತ್ತೆಯಿಲ್ಲ !
ಈಗ ಕಥೆಗಾರನ ಹುಡುಕುವುದರಲ್ಲಿ ಅರ್ಥವಿಲ್ಲ
ಸಿಗದ ಕಥೆಗಾರನ ಬಗ್ಗೆ ಚಿಂತಿಸಿ ಕಾಲ ವ್ಯಯಿಸುವೆಯೇಕೆ??
ಕಥೆಗಾರ ಸಿಗದಿದ್ದರೆನಾಯ್ತು
ಅವನ ಕಥೆಯ ನೀತಿ ಇದೆಯಲ್ಲ.
ಅದರಿಂದ ಅವನ ಚಿಂತನೆ ಗೊತ್ತಾಯ್ತಲ್ಲ !
ಸಾಕಲ್ಲವೇ ಇಷ್ಟು, ಅವನ ವ್ಯಕ್ತಿತ್ವ ಅರಿಯಲು.
ಕಥೆಗೆ ಬೇಕಾದ್ದು ನೀತಿಯೆ ಹೊರತು
ಕಥೆಗಾರನ ಹೆಸರಲ್ಲವಲ್ಲ !!
ಕಥೆಯಲ್ಲಿ ಹೇಳಿದ ಶ್ರೇಷ್ಠ ನೀತಿ, ಭಾವನೆಗಳಿಂದಲೇ
ಕಥೆಗಾರನಿಗೆ ಹೆಸರೇ ಹೊರತು
ಕಥೆಗಾರನಿಂದ ಕಥೆಗೆ ಯಾವುದೇ ಬೆಲೆಯಿರುವುದಿಲ್ಲ!!
ಹಾಗೇ ಮನುಜ ಮಾಡುವ ಒಳಿತಿನಿಂದ
ಅವನಿಗೆ ಹೆಸರೇ ಹೊರತು
ಮನುಜನಿಂದ ಒಳಿತಿಗೆ ಯಾವುದೇ ಹೆಸರಿಲ್ಲ !
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)