ತನ್ನ ತಾ ತಿಳಿಯುವಿಕೆ
ಮೂರ್ತೆತೆಯನ್ನು ತೆಗೆದು ಹಾಕೆ
ಶೇಷವಾಗುಳಿಯುವುದೆ ಅಮೂರ್ತತೆ
ಅನುಭೂತಿ ಆಕಾರವೆಂಬಾವರಣಗಳ
ತೆಗೆಯೆ ತಂತಾನೆ ಪ್ರತ್ಯಕ್ಷ ನಿರಾಕಾರ
ರೂಪವನು ಹರಿಯಬಿಟ್ಟಾಗ ಜೀವನ ನೌಕೆ
ತಲುಪಬಲ್ಲದು ' ಅರೂಪ ಸಾಗರ '
ಸೀಮಾನೆಲೆಯಿಂದ ನೌಕೆ ಮುಕ್ತವಾದಾಗ
ಅಸೀಮತೆಯಲಿ ಲೀನ ಸಾಧ್ಯ
ಮೂರ್ತತೆಯಿಂದ ಮುಕ್ತವಾದಾಗ
ಅಮೂರ್ತತೆಯ ದರ್ಶನ ಲಭ್ಯ
ಆಕಾರದೆಡೆಗೆ ನಿಷ್ಟೆಯನು ನೆಟ್ಟು
ನಿರಾಕಾರದೆಡೆ ಪಯಣ ಹೇಗೆ ಸಾಧ್ಯ?
ಮೂರ್ತಿ ಪೂಜೆಯುಲಿ ವ್ಯಸ್ತನಾದವ
ತನ್ನ ತಾ ತಿಳಿಯಲದ್ಹೇಗೆ ಸಾಧ್ಯ?
ಪ್ರತಿಕ್ರಿಯೆ (6)