ಘುಡುಘುಡುಘುಡಿಸುವಬ್ಬರದಗುಡುಗು
ಗುಡಿಗಿನಬ್ಬರದ ಬೊಬ್ಬಿರಿವ ಬಿರುಗಾಳಿ
ಬಿರುಗಾಳಿಯಬ್ಬರದ ಭೋರಿಡುವ ಜಡಿಮಳೆ
ಜಡಿಮಳೆಯ ಕಾರಿರುಳು ಕಾರಿರುಳಕಾರ್ಮುಗಿಲು
ಕಾರ್ಮುಗಿಲಕೋಲ್ಮಿಂಚುಕೋಲ್ಮಿಂಚ ಬರಸಿಡಿಲು
ಬರಸಿಡಿಲಮುಸಲಧಾರೆ ಮುಸಲಧಾರೆಯಬ್ಬರದಿ
ಧರೆಗಿಳಿಯೆ ಗಂಗಾವತರಣಗಂಗಾಗರ್ವಭಂಗ
ಧೂರ್ಜಟಿಯಜಟಾಜಾಲತರಂಗಪ್ರೇಮಗಂಗ
ಗಂಗಾಶಿವಸಂಗಪ್ರೇಮಪ್ರಸಂಗರಂಗ
ಪ್ರತಿಕ್ರಿಯೆ (3)