ಆ ಮಹಾಭಾರತದ ಭೀಮ.
ತನ್ನಿನಿಯಳಿಗಾಗಿ .....
ಕಾಡು ಮೇಡಲೆದು,
ಗಂಧರ್ವರೊಡನೆ ಸೆಣಸಿ,
ಹನುಮಂತನೊಡನೆ ವಾದಿಸಿ,
ಶೌರ್ಯ ಸಾಹಸವ ಮೆರೆದು,
ತಂದ.......ಸೌಂಗಧಿಕ ಪುಷ್ಟವ.
ಈ ಕಲಿಯುಗದ ನನ್ನವ.....
ಮುಖ್ಯ ರಸ್ತೆಗಳ ದಾಟಿ,
ಟ್ರಾಫಿಕ್ ಡಾಮ್ನಲ್ಲಿ ಕಾದು,
ಜನಸಂದಣಿಯಲ್ಲಿ ಸೆಣಸಿ,
ಗಲ್ಲಿಗಲ್ಲಿಯಲ್ಲಿ ನುಗ್ಗಿ,
ಮಾರುಕಟ್ಟೆಗೆ ಹೋಗಿ,
ತಂದ..... ಸಂಪಿಗೆ-ಕನಕಾಂಬರ ಬೆರೆತ
ಮಲ್ಲಿಗೆ ಹೂವ.
ಪ್ರತಿಕ್ರಿಯೆ (1)