ಕಳುವಾಯ್ತು ಮನೆಯಲ್ಲಿ ಇನ್ನಿಲ್ಲ ಬಂಗಾರ

ಹುಡುಕಿ ಸುಸ್ತಾಗೋದ್ರು ಸಿಗಲಿಲ್ಲ ಆ ಚೋರ

ಮನೆ ಕಾಯಲ್ಯಾರುಂಟು ನನಗೆಲ್ಲಿ ಸಂಸಾರ

ಹಾಕಿದ್ದ ಬೀಗದ ಮೇಲೆ ವಿಶ್ವಾಸವಪಾರ

ಅದಕ್ಕೆ ಸುಲಭವಾಯ್ತೆ ಒಡೆದವನ ವ್ಯವಹಾರ|೧|  
ಏನ ತಂದೆಯೋ ಬೀಗವೊಡೆಯಲು

ಸದ್ದಾಗದಂತೆ ಒಳಗೆ ನುಗ್ಗಲು

ಬೀರುವೊಳಗಿನ ಅಜ್ಜಿ ಬಳೆಗಳ

ಚಿನ್ನವೆ ನೋಡಲು ಜಗ್ಗಿ ಮುರಿಯಲು|೨|   
 
ಇಡೀ ಕಪಾಟನೇ ಖಾಲಿ ಮಾಡಿದೆ

ರೇಡಿಯೋ ಜೊತೆಗಿನ ಕ್ಯಾಸೆಟ್ ಬಿಡದೆ

ಸಿ.ಡಿಯೆನ್ನದೆ, ಪೆನ್ ಡ್ರೈವ್ ಮರೆಯದೆ

ನೇತಾಡುತಿದ್ದ ಪ್ಯಾಂಟನು ಬಿಡದೇ

ಅದ ಕೊಂಡೊಯ್ಯಲು ನನ್ನ ಬ್ಯಾಗನೇ

ಕದ್ದೆಯ ನೀಚ, ಭಲೇ ಕಳ್ಳನೇ|೩|
ಮಾರನೇ ದಿನ ನೋಡೊಡೆದಿದೆ ಬೀಗ

ರೂಮ ತುಂಬೆಲ್ಲಾ ಹರಡಿದ ಗಾಜು

ಬೆಳಬೆಳಗ್ಗೆಯೇ ಬಂತು ಬುಲಾವು

ಹೋಗಿದೆ ಕಂಪ್ಯೂಟರ್ಜೊತೆ ಹಲವು

ಬಸ್ಸಲ್ಲಿ ಬರುವುದರೊಳಗೆ ಪೋಲಿಸು

ಬಂದರಲ್ಲಿಗೆ ಹುಡುಕುತ ಕಳ್ಳಗೆ

ದಾರಿಲಿ ರಿಂಗಿಸಿ ಜಂಗಮ ವಾಣಿ

ಕಂಪ್ಯೂಟರೊಂದೆ ಉಳಿದಿದೆ ಮಾಣಿ

ಇಂದಲ್ಲ ನಾಳೆ ಸಿಗುವವ ಕಳ್ಳ

ಅಲ್ಲಿಯವರೆಗೆ ಕಾಯು ನೀ ಮಳ್ಳ |೪|