ಸಂಬಂಧಗಳಿಂದು   ಗೌಣವೆನಿಸುತಿಹುದು

ಕಾಂಚಾಣದಾಸೆ ಮನಸುಗಳ ಕೆಡಿಸಿಹುದು

ಸ್ವಾರ್ಥತೆ ಎಲ್ಲರ ಮನಸ ತುಂಬಿಹುದು   II1II

 

ತಂದೆ,ತಾಯಿ,ಸಹೋದರ, ಬಂಧು ಗಳಿತ್ಯಾದಿ

ಭಾವನೆ, ಬಂಧಗಳು ಮರೆಯಾಗುತಿಹುದು

ಎಲ್ಲವು ಇಲ್ಲಿ ವ್ಯಾವಹಾರಿಕವೆನಿಸಿಹುದು  II2II

 

ಮಾನವಿಯತೆ,ಕರುಣೆ ಮರೆಯಾಗಿಹುದು

ಕ್ರೌರ್ಯತೆಯು ಎಲ್ಲಡೆ ಮೆರೆಯುತಿಹುದು

ಸಹನೆ ಎಂಬುದು ಎಲ್ಲರಲಿ ಇಲ್ಲದಾಗಿಹುದುII3II

 

ಹಣದಿಂದಲೇ ನೆಮ್ಮದಿ,ಸುಖವು ಸಿಗವು

ಸ್ವಾರ್ಥತೆಯ ತೊರೆದ ಬದುಕು ಸುಂದರವು

ಭಾವನೆ,ಬಂಧಗಳನು ಮರೆಯದಿರಲಿ ಮನವುII4II