ಫೂಟ್ ಬೈಡಿಂಗ್ ಪದ್ಧತಿ ಅನ್ನೊದು ಸೌಂದರ್ಯದ ದೃಷ್ಟಿಯಿಂದ ಚೀನಿಯರು ಬಳಸುತ್ತಿದ್ದ ಭಯಾನಕ ವಿಧಾನ. ಪಾದಗಳು ತುಂಬಾ ಸುಂದರವಾಗಿ ಕಾಣುವಂತೆ ಬದಲಾಯಿಸುವ ನೋವಿನ ಪದ್ಧತಿ ಇದಾಗಿತ್ತು.ಹೆಣ್ಣು ಮಗು ಐದಾರು ವರ್ಷವಿರುವಾಗ್ಲೇ ಪಾದದ ಮುಂಭಾಗವನ್ನು ಮುರಿದು, ಆ ಭಾಗವನ್ನು ಬಿಗಿಯಾದ ಪಟ್ಟಿಯಿಂದ ಕಟ್ಟುತ್ತಿದ್ದರು. ತನಗಿಷ್ಟವಿಲ್ಲವೆಂದು ಹೇಳುವಂತಿರಲಿಲ್ಲ. ತುಟಿ ಬಿಚ್ಚದೆ ನೋವು ನುಂಗಬೇಕಿತ್ತು. ಈ ಆಚರಣೆಯ ಹಿಂದೆ ವಿಕಾರಗೊಳ್ಳುವ ಪಾದದ ನೋವಿನ ಯಾತನೆಯಿತ್ತು.
ವಿಶೇಷ ಅಂದ್ರೆ ಹೀಗೆ ಬಾಗಿದ ಪಾದದ ಉದ್ಧದ ಮೇಲೆ ವಗರ್ೀಕರಣ ಮಾಡಲಾಗುತ್ತಿತ್ತು. ಬಾಗಿದ ಪಾದ ನಾಲ್ಕು ಇಂಚಿದ್ದರೆ ಅದನ್ನು ಬೆಳ್ಳಿ ಕಮಲ ಪದವೆನ್ನುತ್ತಿದ್ದರು. ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿ ಬಾಗಿದ ಪಾದದಗಳು ಕೊಕ್ಕೆಯಂತಿರುತ್ತಿದ್ದವು. ಇಂಥ ಪಾದಗಳನ್ನು ಕಮಲ ಕೊಕ್ಕೆ ಪಾದ ಅಂತಿದ್ರು. ಫೂಟ್ ಬೈಂಡಿಂಗ್ನಿಂದಾಗಿ ಮಹಿಳೆ ಸುಂದರವಾಗಿ ಕಾಣುವುದಕ್ಕಿಂತ ಹೆಚ್ಚಾಗಿ ಕುಂಟಿಯಂತೆಯೇ ಜೀವನವಿಡೀ ಬದುಕ ಬಂಡಿ ಸಾಗಿಸಬೇಕಾಗುತ್ತಿತ್ತು. ಅದ್ರಲ್ಲೂ ನಡೆದಾಡುವಾಗಲಂತೂ ಅನುಭವಿಸೋ ಸಂಕಟಕ್ಕೆ ಮಿತಿಯಿರುತ್ತಿರಲಿಲ್ಲ.
ಕ್ರಿ.ಪೂ. 970ರ ಟಾಂಗ್ ಮನೆತನದ ವೇಳೆ ಫೂಟ್ ಬೈಂಡಿಂಗ್ ಆಚರಣೆ ಶುರುವಾದ ಬಗ್ಗೆ ಇತಿಹಾಸದಲ್ಲಿ ಪುರಾವೆಗಳಿವೆ. ಟಾಂಗ್ ಮನೆತನದ ಪ್ರಸಿದ್ಧ ದೊರೆ ಲಿ ವು. ಒಮ್ಮೆ ಈತನ ಮುದ್ದಿನ ಪತ್ನಿ ಯಾವೊ ನೈಂಗ್ ನೃತ್ಯ ಪ್ರದರ್ಶನ ನೀಡಿದ್ದಳು. ಅದು ವಿಶಿಷ್ಟ ನೃತ್ಯ. ತನ್ನ ಕಾಲನ್ನು ರೇಷ್ಮೆಯ ಪಟ್ಟಿಯಿಂದ ಕಟ್ಟಿಕೊಂಡು ಕಮಲ ಪೀಠದ ಮೇಲೆ ಕುಣಿದಿದ್ದಳು. ಅಂದು ಆಕೆಯ ಪಾದ ಕಮಲ ಪಾದದಂತೆ ಕಂಡಿತ್ತು. ಅಂಥ ಪಾದವನ್ನು ಕಮಲದ ಪಾದ, ನೈದಿಲೆ ಪಾದ ಅಂತೆಲ್ಲಾ ಕರೆಯಲಾಗಿದೆ. ಹಾಗಾಗಿ ಫೂಟ್ ಬೈಂಡಿಂಗ್ ಆಚರಣೆ ಶುರುವಾಯಿತು.
ಫೂಟ್ ಬೈಡಿಂಗ್ ಆಚರಣೆಯ ಹಿಂದೆ ಅನೇಕ ದಂತಕಥೆಗಳಿವೆ. ಅವುಗಳಲ್ಲಿ ಬಹುಮುಖ್ಯವಾಗಿ ಟಾಂಗ್ ರಾಜವಂಶದ ಆಳ್ವಿಕೆಯ ವೇಳೆ ಬಳಕೆಯಲ್ಲಿದ್ದ ಬಗ್ಗೆ ಲಿಖಿತ ರೂಪದ ಪುರಾವೆ ದೊರೆಯುತ್ತದೆ. ಈ ಪ್ರಕಾರವಾಗಿ ಆಸ್ಥಾನದ ನರ್ತಕಿಯರು ಮೊದಲ ಬಾರಿಗೆ ಫೂಟ್ ಬೈಡಿಂಗ್ ಪದ್ಧತಿಯನ್ನು ಬಳಸಿದ್ರಂತೆ. ಹಾಗಾಗಿಯೇ ಆಸ್ಥಾನ ನರ್ತಕಿಯರು, ತಮ್ಮ ಬಾಗಿದ ಪುಟ್ಟ ಪಾದಗಳಿಂದ, ಅವುಗಳನ್ನು ಮುಚ್ಚಿದ್ದ ಕಮಾನು ಶೂಗಳಿಂದ ಖ್ಯಾತಿ ಹೊಂದಿದ್ದರು. ಟಾಂಗ್ ಮನೆತನದಲ್ಲಿ ಹುಟ್ಟಿಕೊಂಡ ಆಚರಣೆ ನಂತರ ಬಂದ ಮಿಂಗ್, ಚಿಂಗ್ ಮನೆತನಗಳ ಕಾಲಾವಧಿಯಲ್ಲಿ ಆಚರಿಸಲ್ಪಟ್ಟಿತ್ತು. ರಾಜಮನೆತನ ಮತ್ತು ರಾಜಾಸ್ಥಾನವನ್ನು ಮೀರಿ ಕ್ರಮೇಣ ಮೇಲ್ವರ್ಗದ ಜನರನ್ನು ಆರ್ಕಷಿಸಿತ್ತು. ಮೇಲ್ವರ್ಗದ ಜನರ ಮೂಲಕ ಸಾಮಾನ್ಯರತ್ತಲ್ಲೂ ಫೂಟ್ ಬೈಂಡಿಂಗ್ ಪಸರಿಸಿತ್ತು. ರಲ್ಲಿ ನಾಗರೀಕ ದಂಗೆ ಉಂಟಾಯ್ತು. ಆ ತರುವಾಯ ಅಧಿಕಾರಕ್ಕೆ ಬಂದ ಕಮ್ಯೂನಿಸ್ಟ್ ಸಕರ್ಾರ ಶಾಶ್ವತವಾಗಿ ಫೂಟ್ ಬೈಂಡಿಂಗ್ ಪದ್ಧತಿಯನ್ನು ರದ್ದು ಮಾಡಿತು. ಕಮ್ಯೂನಿಸ್ಟ್ ಸಕರ್ಾರಕ್ಕೂ ಮುನ್ನ ಹಲವಾರು ರಾಜಮನೆತನಗಳು ಫೂಟ್ ಬೈಂಡಿಂಗ್ ಪದ್ಧತಿಯನ್ನು ವಿರೋಧಿಸಿ, ನಿಲ್ಲಿಸಿದ್ದವು. ಆದ್ರೆ ಒಂದಾದ ಮೇಲೊಂದ್ರಂತೆ ಬದಲಾದ ರಾಜಮನೆತನಗಳಿಂದಾಗಿ ಆಚರಣೆ ಒಮ್ಮೊಮ್ಮೆ ನಿಂತು, ಮತ್ತೊಮ್ಮೆ ಆಚರಿಸಲ್ಪಡುತ್ತಿತ್ತು. ಆದ್ರೆ ಕಮ್ಯೂನಿಸ್ಟ್ ಸಕರ್ಾರ ಬಂದ ಎಷ್ಟೂ ಪರಿಣಾಮಕಾರಿಯಾಗಿ ನಿಲ್ತು ಅಂದ್ರೆ ಗ್ರಾಮೀಣ ಭಾಗಗಳಲ್ಲೂ ಅದ್ರ ಆಚರಣೆ ಸಂಪೂರ್ಣ ರದ್ದಾಗಿದೆ.
ಮುಖ್ಯವಾಗಿ ಯುನಾನ್ ಪ್ರಾಂತ್ಯದ ಲಿಉಯಿ ಹಳ್ಳಿ ಮುನ್ನೂರಕ್ಕೂ ಅಧಿಕ ಮಂದಿಯನ್ನು ಹೊಂದಿದೆ. ಅಂಥ ಕಮಲಪಾದದ ಮಹಿಳೆಯರದ್ದು ಸುಮಾರು 70-80ರ ವಯಸ್ಸು. ಉಳಿದ ಮಹಿಳೆಯರ ಪಾದಗಳ ಮೂಲಕ ಫೂಟ್ ಬೈಂಡಿಂಗ್ ಅನ್ನೋ ಪದ್ಧತಿ ಇವತ್ತಿಗೂ ಸಾಕ್ಷ್ಯವಾಗಿ ಉಳ್ಕೊಂಡಿದೆ...

 

1948