ಬಣ್ಣ
ಅಂತರಂಗದ ಬಣ್ಣ ಅವರವರಿಗೆ ಸ್ಪಸ್ಟ
ಹಿಡಿದಿಟ್ಟ ಬಣ್ಣ ! ಅವ್ಯಾಹತವಾಗಿ ಮುಖದಲ್ಲಿ ವ್ಯಕ್ತ !
ಆನೆಗೆ ತೋರಲು ದಂತ ಬೇರೆ ! ಜಗಿಯಲು ಬೇರೆ !
ನಮಗೇಕೆ ಈ ಕಷ್ಟ ! ನನ್ನ ಮೂಗಿನ ನೇರಕ್ಕೆ ಎಲ್ಲ ಅಸಾದ್ಯ !
ಆದರು ನೂಕು ನುಗ್ಗಲು ! ದಾರಿ ಬಿಡಿ ! ದಾರಿ ಬಿಡಿ..
ಇದೆಲ್ಲ ನನ್ನಂತೆ , ನಾ ಕಂಡ ರಹದಾರಿ !
ನಾನು , ನನ್ನ ನೆರಳು
ನನ್ನ ಆಸ್ತಿತ್ವ ನನಗೇ ಗೊತ್ತಿಲ್ಲ
ಹಿಂದೆ – ಮುಂದಿನ ಪ್ರಜ್ಞೆ ಇಲ್ಲವೇ ಇಲ್ಲ
ಆದರೂ ಹೀಗೇಕೆ ? ನಾನು ಇಲ್ಲಿ ಅತಂತ್ರನೆ !
ಹೇ ಸರ್ವಸ್ವತಂತ್ರ !
ನಿನ್ನರಿವು ! ಕಾಣ್ವೆ ನನ್ನ ಅಭಿಮಾನ ನಿವೃತ್ತಿಯದಾಗಲೇ ?
ಅರ್ಪಣಯೇ ವಿಮುಕ್ತಿಯಲ್ಲವೇ ?
-ಗಿರೀಶ್ ಶ್ರೀನಿವಾಸ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!