ಈ ಕೆಳಗೆ ಘಟನೆಯೊಂದನ್ನು ಕೊಟ್ಟಿದ್ದೇನೆ. ನಾನು ಬರೆದಿದ್ದೇ ಒಂದು ಸಣ್ಣ ಕಥೆಯಾಗಿದೆ. ಇರಲಿ. :-) ಒಳ್ಳೆಯ ಕಥೆಗಾರ ಇದನ್ನು ಬಹು ಕಾಲ ನೆನಪಿನಲ್ಲುಳಿಯುವ ಸ್ವಾರಸ್ಯಕರ ಕಥೆಯಾಗಿಸಬಲ್ಲ ಎಂದು ನನಗೆ ಆಗಲೇ ಅನ್ನಿಸಿತ್ತು. ಈಗ ಕೂಡ ಅನ್ನಿಸುತ್ತಿದೆ. ಹಾಗಾಗಿ, ಇದನ್ನೇ ವಿಸ್ತಾರಿಸಿ ಕಥೆ ಬರೆಯಲು ನಿಮಗಿದೋ ಆಹ್ವಾನ.
ಘಟನೆ:
ಶ್ರೀಯುತ ಗಜಾನನ ಭಟ್ಟರು ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ. ಅವರಿಗೆ ತಮ್ಮ ಸಂಪ್ರದಾಯಗಳ ಕುರಿತು ಶ್ರದ್ಧೆ, ಹೆಮ್ಮೆ. ಒಮ್ಮೆ ಯುಗಾದಿಗೆ ಊರಿಗೆ ಹೋಗಿದ್ದ ಅವರಿಗೆ ಆ ವರ್ಷದ ರಾಶಿ ಫಲವನ್ನು ಅದೇಕೋ ಕೇಳಲಾಗಲೇ ಇಲ್ಲ. ಊರಿನಿಂದ ಮರಳಿ ಬರಲು ರೈಲು ಹತ್ತಿದ ಅವರಿಗೆ, ಆ ಸಂವತ್ಸರದ ಪಂಚಾಂಗವನ್ನು ಕೊಂಡು ತಮ್ಮ ರಾಶಿ ಫಲವನ್ನು ಓದುವ ಮನಸ್ಸಾಯಿತು. ರೈಲು ಬಿಡುವ ಸಮಯವಾಗಿತ್ತು. ಅದು ಹೇಗೋ ಓಡಿ ಹೋಗಿ ತಮ್ಮ ನೆಚ್ಚಿನ ಪಂಚಾಂಗವನ್ನು ರೈಲ್ವೆ ನಿಲ್ದಾಣದ ಪುಸ್ತಕದ ಅಂಗಡಿಯಿಂದ ಕೊಂಡು ತಂದರು. ಈ ಗಡಿಬಿಡಿಯಲ್ಲಿ ತಮ್ಮ ಕಾಲನ್ನೂ ಉಳುಕಿಸಿಕೊಂಡರು.
ರೈಲಿನಲ್ಲಿ ಕಾಲು ನೋವು ಹೆಚ್ಚಾದ್ದರಿಂದ ಅವರಿಗೆ ಪಂಚಾಂಗವನ್ನು ಓದಲಾಗಲಿಲ್ಲ. ದೆಹಲಿಯ ಮನೆ ತಲುಪಿದ ಮೇಲೂ, ಕಾಲು ನೋವಿಗೆ ಆಸ್ಪತ್ರೆ ಓಡಾಟ - ಕಚೇರಿಯ ರಾಶಿ ಬಿದ್ದ ಕೆಲಸದ ಒತ್ತಡಗಳ ನಡುವೆ, ರಾಶಿ ಫಲವನ್ನು ಓದಲಾಗಲಿಲ್ಲ. ಅಂತೂ ಹತ್ತು - ಹದಿನೈದು ದಿನಗಳ ನಂತರ ಪಂಚಾಗ ತೆರೆದು ಓದಲು ಕುಳಿತರು.
ಅವರ ರಾಶಿ ಫಲದಲ್ಲಿ ಹೀಗೆ ಬರೆದಿತ್ತು: ಅಬಕಡ ಅಬಕಡ ಅಬಕಡ ಅಬಕಡ ಅಬಕಡ ಅಬಕಡ ಅಬಕಡ. ಅಬಕಡ ಅಬಕಡ ಅಬಕಡ ಅಬಕಡ ಅಬಕಡ ಅಬಕಡ. ನಿಮಗೆ ಈ ವರ್ಷ ಉತ್ತಮ ಆರೋಗ್ಯ ಭಾಗ್ಯವಿದೆ ಎಂದೇ ಹೇಳಬಹುದು. ಆದಾಗ್ಯೂ, ಪ್ರಯಾಣದ ಸಮಯದಲ್ಲಿ ಕಾಳಜಿ ಅಗತ್ಯ. ವರ್ಷದ ಮೊದಲಲ್ಲಿ ನೋವನ್ನು ಅನುಭವಿಸುವ ಸಾಧ್ಯತೆಯಿದೆ. ಅಬಕಡ ಅಬಕಡ ಅಬಕಡ ಅಬಕಡ ಅಬಕಡ ಅಬಕಡ. ಅಬಕಡ ಅಬಕಡ ಅಬಕಡ ಅಬಕಡ ಅಬಕಡ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ದಾರಿ ಹಲವು
ಮರೆಯಬೇಡ ಗುರಿಯ ...
ನನ್ನ ತಂದೆ ಇನ್ನಿಲ್ಲ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)