ಉನ್ಮತ್ತ ಸಾಗರವೆ ಸೊಕ್ಕಿ ಗರ್ಜಿಸಬೇಡ

ಈ ಕ್ಷಣಕೆ ದೈವ ನಿನಗನುಕೂಲಿಯೆಂದು

ತೋರಬೇಡೆ ಪ್ರತಾಪ ಭುವಿಯನಾಕ್ರಮಿಸಿ

 

ಸ್ವಲ್ಪ ತಾಳು ದೈವ ಮುನಿಯಿತೊ

ಅದರ ಲಕ್ಮಣ ರೇಖೆಯನು ದಾಟಿ

ಒಂದಂಗುಲ ಕೂಡ ಮುನ್ನಡೆಯಲಾರೆ

 

ಗೆದ್ದ ಇಂಚಿಂಚು ಭೂಮಿಯನು

ಭುವಿಗೆ ಹಿಂದಿರುಗಿಸುತ್ತ  ಮರಳಿ ಹೋಗುವೆ

ಮತ್ತೆ ಮೂಲ ನೆಲೆಗೆ

 

ಸಾಗರವೆ ! ಉನ್ಮತ್ತವಾಗಬೇಡ

ವಿವೇಚನೆಯಿರಲಿ ಯಾಕೆ ಗೊತ್ತೆ?

ನಿನಗೆ ಅಸ್ತಿತ್ವವಿರುವುದೆ ಭೂಮಿಯಿಂದ