ಸುಂದರ ಸಂಜೆಯಲಿ ಗಗನದೆತ್ತರದಲ್ಲಿ
ಅಲೆಗಳು ಹುಯಿಲೆದ್ದು ಬೆಳ್ನೊರೆಯ ಕಿರುದೆರೆ
ಕಾಲ್ಬೆರಳ ಸಂದಿಯಲಿ ನುಸುಳಿ ಕಚಗುಳಿಯಿಟ್ಟು
ಮರಳ ದಂಡೆಯಲಿ ಕರಗಿ ಇಲ್ಲವಾಗುವಾಗ
ಕಡಲೇ! ನೀನು ನೆನಪಾಗುತ್ತಿ
ಕಡಲೆ ನೀನೊಂದು ಅಣು ಹಾಗೆಯೇ ಬೃಹತ್ ಕೂಡ
ನಾನೊಬ್ಬ ಬರಿಗಾಲ ದಾರಿಹೋಕ
ಈಜದೇ ದಾಟಲಾಗುವುದಿಲ್ಲ ಭವಸಾಗರ
ಹಾಯಿ ಡೋಣಿಯು ಇಲ್ಲ
ಕಾಯುತಿವೆ ತಿಮಿಂಗಲು ಕಡಲ ಕತ್ತಲೆಯ
ಗರ್ಭದಾಳದಲಿ ಇಷ್ಟಗಲ ಬಾಯಿ
ಕೋರೆ ಹಲ್ಲುಗಳ ತೆರೆದು
ಆದರೂ ಬರುತ್ತೇನೆ
ಸುಂದರ ಕನಸುಗಳು ಬರುವಂತೆ
ಕಡಲು ಬಾನುಗಳು ಕೂಡುವೆಡೆಯಲ್ಲಿ
ಬದುಕು ಸಾರ್ಥಕ ಆ ' ಸಂಗಮದಲ್ಲಿ '
ಪ್ರತಿಕ್ರಿಯೆ (5)
ಕಾರವಾರದ ದೇವಭಾಗ್ ಕಡಲ ತೀರದ ಸ೦ಜೆಯ ಮತ್ತೊ೦ದು ಸು೦ದರ ಚಿತ್ರವಿಲ್ಲಿದೆ.