ಹೇ ಗೆಳತಿ , ಪ್ರೀತಿಸಿದೆ ನಾನಿನ್ನ ಅನುಕ್ಷಣ..

ನೀನೂ ತೋರಬಾರದೆ ಪ್ರೀತಿಯ ಲಕ್ಷಣ..

ಮರೆಯಲಾದೀತೆ ನಿನ್ನೊಂದಿಗಿನ ಮಧುರ ಕ್ಷಣ..

ನನ್ನ ತುಂಟ ನಗುವಿಗೆ ನೀನಾಗುತಿದ್ದೆ ಕಾರಣ....!!!

 

ನವಿರಾದ ನೋಟದಿ ನೀ ಉಣಬಡಿಸಿದ ಪ್ರೀತಿಯ ಹೂರಣ..

ಚಂಚಲ ಮನದಿಂದಾಡಿದ ಅಚಲ ಮಾತಿನ ಔತಣ..

ದಿಟ್ಟ ನಿಲುವೊಂದ ಸ್ವೀಕರಿಸಲು ನೀನನುಭವಿಸಿದ ತಲ್ಲಣ..

ಭಾವನೆಗಳ ಬದುಕಲ್ಲಿ ನೀನಾಗಿದ್ದೆ ನನ್ನ ಪ್ರೆರಣ...!!!

 

ಮಾತುಗಾರ ನಾ, ನೀ ಸನಿಹಕೆ ಬಂದರೆ ಕಾಡುವುದು ಮೌನ...

ಮನದಾಳದಿ ಮನೆಮಾಡಿ ಆವರಿಸಿರುವೆ ನನ್ನ..

ಅಪರಂಜಿ ನೀನು , ನಿನಗಿಟ್ಟಿರುವೆ  ಹೆಸರು 'ಚಿನ್ನ'...

ಒಲವಿಡಬಾರದೆ ನನ್ನಲ್ಲಿ ನಾನಗಲುವ ಮುನ್ನ....!!!!