ಓ ನನ್ನ ಆತ್ಮಿಯ  ದೇವರೆ

ಬೇಕೇನಗೆ ನಿನ್ನ ಪ್ರೀತಿಯ ಆಸರೆ

ಸಂಸಾರ ಬಂಧನದಲ್ಲಿ ನಾನಿಂದು ಸೆರೆ

ಇಳಿಸಲಾರೆಯಾ ಈ ಜಂಜಾಟದ ಹೊರೆ

ಕೇಳಿಸುತ್ತಿಲ್ಲವೆ ನಿನಗೆ ನನ್ನ ಕರೆ

 

ಕಾಣಿಸುತ್ತಿಲ್ಲವೆ ನನ್ನ ಕಣ್ಣಿರಿನ ಹೊಳೆ

ಸುರಿಸಲಾರೆಯ ನಿನ್ನ ಕರುಣೆಯ ಮಳೆ

ತೋಳೆಯಲಾರೆಯ ನೀ ಎನ್ನ ಮನದ ಕೊಳೆ

ಸಾಕು ನನಗಿ ಸಂಸಾರದ  ರಗಳೆ

ಬದುಕಿಗೆ ನೀಡು ನೀ ಹೊಸ ಕಳೆ