ಬುದ್ಧಿ ತಿಳಿದಾಗಿಂದ 'ಎಲ್ಲವನ್ನೂ'
ಬರೀ 'ಊಹೆ' ಮಾಡುತ ಬೆಳೆದ
ಅವನ
ಎಲ್ಲ 'ಊಹೆಗಳು' ದಿಟವಾಗಲಿಲ್ಲ
ಹಾಗಂತ, ಅನ್ನಿಸಿದ ಕೆಲ 'ಊಹೆಗಳು' ಸುಳ್ಳಾಗಲೂ ಇಲ್ಲ!
ಜಗದೊಳು 'ಬಹು' ಜನ ಊಹೆ ಮಾಡುತಲೇ ಬದುಕುತಿರೆ
'ಬರೇ ಊಹೆ' ಮಾಡುತಲೇ ಬಾಳಿ - ಬದುಕುತ್ತಿರುವ
ಅವನ 'ಊಹೆ' ಗಳ ಪಟ್ಟಿ ಇನ್ನೂ,
ಮುಗಿದಿಲ್ಲ!!
ಚಿತ್ರ ಮೂಲ:
http://zermatschen.wordpress.com/2011/11/27/imagination-is-more-important-than-knowledge-albert-einstein/
ಪ್ರತಿಕ್ರಿಯೆ (5)