ಇಲ್ಲೊಬ್ಬ ಮಹಾಪುರುಷ 

ಎಸಗಿರುವ ಅಮಾಯಕಿಯ 
ಅತ್ಯಾಚಾರವ, ಕುರುಡು 
ಕಾಮನೆಯಲಿ, ಕಿತ್ತು ತಿಂದಿರುವ
ಅವಳ ಶೀಲ, ಚಾರಿತ್ರ್ಯವ 
ಕತ್ತಲೆಯ ಕೋಣೆಯಲಿ


ಹೊರಗೆ ಬಂದವನು 
ಬಟ್ಟೆಯ ಮುಚ್ಚುತಿರುವ 
ಅವಳ ಅರೆ ನಗ್ನ ದೇಹಕೆ 
ಕಣ್ಣಂಚಲಿ ಕೃತಕ 
ಕಾರುಣ್ಯ ಧಾರೆಯ ಹರಿಸುತ
ಹೆಣ್ಣ ಮಾನ ಕಾಪಾಡುವ 
ಮಹಾ ಪುರುಷನ ವರಸೆಯಲಿ 


ಮತ್ತೊಬ್ಬ ದೇಶದ ನಾಯಕನಿಲ್ಲಿ 
ಕಿತ್ತು ತಿಂದಿರುವ ದೇಶದ ಆಸ್ತಿಯ
ಪ್ರಜೆಯ ಬೆವರ ಹನಿಯ ಮೇಲೆ 
ಕುಣಿದು ಕುಪ್ಪಳಿಸುತ 
ಹರಾಜಿಗಿಟ್ಟ ದೇಶದ ಮಾನವ 
ಈಗ ಮಾಡುತಿರುವ ಭಾರತಾಂಬೆಗೆ 
ನುಡಿ ನಮನವ, ಹಾಕಿ ಹೂವಿನ್ಹಾರವ 
ದೇಶ ಉದ್ಧಾರ ಮಾಡಿದ ವರಸೆಯಲಿ 


ಅತ್ಯಾಚಾರವೆಸಗಿ ಬಟ್ಟೆ ತೊಡಿಸುವವರಿವರು.....