ಅದ್ಯಾವ್ದೋ ಭವಿಷ್ಯದ ದಿನಾಂಕ -ದಿನ, ಆ ದಿನ ಬೆಳಗ್ಗೆ ನಸುಕಿನಲ್ಲೇ ಎದ್ದು 'ನಿತ್ಯದಂತೆ' ಮನೆ ಮುಂದೆ ನೀರು ಚಿಮುಕಿಸಿ, 'ರಂಗೋಲಿ' ಹಾಕುತ್ತ ಕುಳಿತಿದ್ದ ಸಕಲ ಮಲ್ಲೇಶ್ವರ ದ ಮಹಿಳೆಯರು ರಂಗೋಲಿ ಬಿಸಾಕಿ ಮನೆ ಹೊಳಗದೆ ಓಡುತ್ತಾ ಹೋದರು:)
ಸುಮಾರು ೫ ದೊಡ್ಡ ಟ್ರಕ್ಕುಗಳು ಸರ್ರನೆ ಬಂದು ಗಕ್ಕನೆ ಬ್ರೇಕ್ ಹಾಕಿ, ಅದರಿಂದ ಸಮವಸ್ತ್ರಧಾರಿಗಳಾದಸುಮಾರು ೫೦ ಜನ ಕಮಾಂಡೋ ಹಾಗಿದ್ದವ್ರು ಇಳಿಯಲು, ಅದಾಗಲೇ ಆ ಗಾಡಿಗಳ ಶಬ್ದ ಕೇಳಿಗಾಭರಿಯಾಗಿ ಮತ್ತೆ ಇಗ ಸಮವಸ್ತ್ರಧಾರಿ ಕಮಾಂಡೋ ತರ್ಹ್ದವರನ್ನ ಆ ಗಾಡಿಯಿಂದ ಇಳಿದದದನ್ನ ಮಲ್ಲೇಶ್ವರದ ಜನತೆಗೆ ಭಯ ಗಾಭರಿ ಆಯ್ತು, ನಮ್ಮ ಏರಿಯ ಗೆ ಯಾರೂ ಉಗ್ರಗಾಮಿಗಳು ನುಗ್ಗಿಲ್ಲವಸ್ಟೇ?
ಇದು ಬಹು ಪ್ರಶಾಂತ ಸ್ಥಳ, ಇಲ್ಲಿ ಅಪರಾಧ ಕಡಿಮೆ, ಅದ್ಯಾವ 'ದುಷ್ಟರ' ಕಣ್ಣು ನಮ್ಮ ಏರಿಯ ಮೇಲೆಬಿತ್ತು? ಕಾಡು ಮಲ್ಲೇಶ್ವರ ಕಾಪಾಡು ಎಂದರು!!
ರಾಮ ಮೋಹನರು ಆದಿಯಾಗಿ ಅದೆಸ್ಟೋ ಜನ ಮಲ್ಲೇಶ್ವರ ಇಡೀ 'ಜಾಲ' ಹರಡಿ 'ಬಲೆ' ಬೀಸಿ ಜಾಲಾಡಿದರೂ ಸಿಗದ ಆದರೆ ಅದೇಗೋ(!!) -ಯಾಕೋ(!) ಪಾರ್ಥರಿಗೆ ಮಾತ್ರ ಸಿಕ್ಕ ಈ 'ಗಣೇಶ್' ಎಂಬುವವರನ್ನ ಈ ಸಾರಿ 'ಹೇಗಾದರೋ' ಮಾಡಿ -ಅಂದರೆ ತಂತ್ರ-ಪ್ರತಿ ತಂತ್ರ- ಕುತಂತ್ರ- ಷ್ಯಡ್ಯಾ೦ತ್ರ ಮಾಡಿ 'ಹಿಡಿಯಲೇ' ಬೇಕು, ಅವರು 'ಹೆಂಗಿರ್ವರೋ ' ನೋಡಲೇ ಬೇಕು ಅಂತ ಬಹುಪಾಲು 'ಸಂಪದಿಗರು' ಒಂದೆಡೆ ಸೇರಿ ಚರ್ಚೆ ಮಾಡಿ ಗಣೇಶ್ ಅವರನ್ನು ಹಿಡಿಯುವ -ಅಲ್ಲಲ್ಲ ಹುಡುಕುವ- ಬಗ್ಗೆ ಎಲ್ರೂ 'ಒಕ್ಕರಲಿಂದ' ನಿರ್ಣಯಿಸಿದರು.
, ನಮಗೆ ಸಿಗದೇ 'ಚಳ್ಳೆ ಹಣ್ಣು ' ಚೆರ್ರಿ ಹಣ್ಣು ' ತಿನ್ನ್ಸುತ್ತಿರ್ವ, ಆ ಗಣೇಶನ್ನ ಈ ಸಾರಿ ಸಾಮ- ಬೇಧ -ಧನ್ದ -ಇಂದ ಹಿಡಿಯಲುಆಗಲ್ಲ, ರಾತ್ರಿ ಸಿಕ್ತಾರೆ ಅಂತ 'ನೆಟ್ ಗೆ' ಬಲೆ ಹಾಕಿದರೆ ತಮ್ಮ 'ವಾಹನವನ್ನ ' ಬಿಟ್ಟು...................... ರೆ..
ಅದು ಸೂರ್ಯನಿಗೆ ಟಾರ್ಚು ಹಾಕಿದಂಗೆ ಆಯಿತು...!!
ಅದಕ್ಕೆ ಈ ಸಾರಿ ಇಡೀ ಮಲ್ಲೇಶ್ವರ ಗೆ ಬಲೆ ಹರಡಿ ಸುಮಾರು ೫೦ ಜನ ಮಲ್ಲೇಶ್ವರದ ಸಕಲ ಕ್ರಾಸು- ಬೀದಿ- ಗಲ್ಲಿ ಎಲ್ಲಓಡಾಡಿ-ಹುಡುಕಾಡಿ ಗಣೇಶ ಅವರನ್ನ ಕಂಡು ಹಿಡಿದು ತಮ್ಮ ಜೊತೆ ಕರೆ ತರಬೇಕು ಅಂತ ತೀರ್ಮಾನಿಸಿ, ಅದಕ್ಕಾಗಿ 'ತರ್ಕ'ಬದ್ದವಾಗಿ ಯೋಚಿಸುವ 'ಒಬ್ಬರ' ಸಲಹೆ ಕೇಳಲು, ಅವರು ಕೊಟ್ಟ 'ಐಡಿಯಾ' ಎಲ್ಲರಿಗೂ ಹಿಡಿಸಿತು...
ಹೌದು ಏನು ಆ ಐಡಿಯಾ?
ಅದಾ?
ಅದು...
.
.
..
೫೦ ಜನರೂ ಮೊದಲು ಸಕಲ ತರಭೇತಿ ಪಡೆದು 'ಸಮವಸ್ತ್ರಧಾರಿಗಳಾಗಿ' ಕೈನಲ್ಲಿ 'ಅದನು' ಹಿಡಿದು ರೆಡಿ ಅಂದ ಕೊಡಲೇ ವ್ಯಾನಿಂದ ಇಳಿದು ಸುತ್ತಮುತ್ತ ಎಲ್ಲ ಕಡೆ 'ದುರ್ಬೀನು' ಹಾಕಿ ಹುಡುಕಬೇಕು....
ಎಲ್ಲ ಸಮವಸ್ತ್ರಧಾರಿ ಕಮಾಂಡೋಗಳ ಕೈಲಿ ಇದ್ದ ಆಯುಧ ಒಂದೇ ಅದು- 'ದೋಸೆ'
>>ಬೆಣ್ಣೆ ಹಾಕಿ ಮಾಡಿದ್ದು, ಅದರ ಘಮ ಘಮ ಇಡೀ ಮಲ್ಲೇಶ್ವರ ವ್ಯಾಪಿಸಿತ್ತು!! ಅದಾಗಲೇ ಬಹು ಬಾರಿ 'ದೋಸೆ' ಅವ್ರಿಗ್ ಎಷ್ಟು'ಇಷ್ಟ' ಅಂತ ಗೊತ್ತಗಿತ್ತಲ್ಲ ಅದಕ್ಕೆ ಆ 'ದೋಸೆಯ' ದೆಸೆಯಿಂದಲೇ 'ಅವರನ್ನ' ಹಿಡಿಯಲು ೫೦ ಜನ ಹುಡುಕಾಡುತ್ತಿದ್ದರುಮಲ್ಲೇಶ್ವರದ ಹಾದಿ-ಬೀದಿ ಗಲ್ಲಿ ಸಹಾ ಬಿಡದೆ...
ಬೆಳಗ್ಗೆ ಎಲ್ಲಾದರೂ ಪಾರ್ಕ್ ನಲ್ಲಿ ಇಲ್ಲ ರಸ್ತೆ ಮೇಲೆ ಜಾಗಿಂಗು ವಾಕಿಂಗು ಮಾಡುವಲ್ಲಿ 'ಅವರನ್ನ' ಹುದುಕಬಹುದಿತ್ತಲ್ಲ? ಅದು ಬಿಟ್ಟುಈ ಗಲ್ಲಿ- ಬೀದಿ ಯನ್ನ ಕೈಲಿ 'ದೋಸೆ' ಹಿಡಿಕೊಂಡು ಹುಡುಕೋದ? ಅಂತ ಯಾರಿಗರ ಸಂಶಯ ಬರಬಹುದು!! ಅದನ್ನೂ'ಆಪರೇಶನ್ ಗಣೇಶ್ ಸಭೆಯಲ್ಲಿ' ಚರ್ಚಿಸಿದಾಗ 'ಆವರು' ವ್ಯಾಯಾಮಕ್ಕೆ ವಿರುದ್ಧ -ಅದ್ರ ಬದ್ಧ ದ್ವೇಷಿ ಅಂತ ತಿಳೀತು!! .ಮಾಹಿತಿಗಾಗಿ ಇಲ್ಲಿ ನೋಡಿ
ವ್ಯಾಯಾಮ್ ಹರಾಮ್ ಹೈ | ಸಂಪದ -
http://sampada.net/blog/03/10/2007/5844#comment-158879
ನಾವು ಈ ಆಪರೇಶನ್ ಗಣೇಶ್ ಧಾಳಿಗೆ ಮೊದಲು 'ಇನ್ನೊಂದನ್ನು' ಯೋಚಿಸಿ ಅದಕ್ಕಾಗಿ 'ಅವರನ್ನು' ಹಿಡಿಯಲು ಮಲ್ಲೇಶ್ವರದ'ಅಡಿಗ ಸ' ಹೋಟೆಲ್ಲಿನಲ್ಲಿ ನಮ್ಮ ಕಡೆಯ 'ಎಲ್ಲರನ್ನ' ವೇಷ ಮರೆಸಿ ,ಸಾದಾ ಡ್ರೆಸ್ಗಳಲ್ಲಿ 'ಮಫ್ತಿಗೆ' ಹಾಕಿದ್ದೆವು ಆದರೆ 'ಅದುಹೇಗೋ' ಅವ್ರಿಗೆ 'ಈ ನಮ್ಮ' ಈ 'ರಹಸ್ಯ' ಧಾಳಿಯ 'ಮಾಹಿತಿ' ಸೋರಿಕೆಯಾಗಿ!! ಅವರನ್ನ ಹುಡುಕುವ ಮೊದಲೇನಾಪತ್ತೆಯಾಗಿದ್ದರು")
ಅವ್ರ ಒಂದು ಫೋಟೋ ಇಲ್ಲ(ನಮ್ಮ ಹತ್ತಿರ ಇದ್ದದ್ದು ಒಂದೇ 'ಅದು ದೊಡ ಗಾಜಿನ ಕನ್ನಡಕವನ್ನ ಕ .ಒಂದಕ್ಕೆ ನೇತು ಹಾಕಿದ್ದು!!)
ವಯಸ್ಸು ಆಗಾಗ ಕೆಲ ಪ್ರತಿಕ್ರಿಯೆಗಳಲ್ಲಿ ಅವ್ರೆ ಹೇಳಿದರೂ () ಅವ್ರ ಕರಾರುವಾಕ್ಕು ವಯಸ್ಸನ್ನ 'ತರ್ಕ' ಹಾಕಿಯೂ ಗೊತ್ತಾಗದೆಪರದಾಡಬೇಕಾಯ್ತು!!
ಆಗಾಗ ಅವ್ರೆ ನಾ ಹೀಗೆ-ಹಾಗೇ ಅಂದರೂ() ಅದು ನಿಜ-ಸುಳ್ಳೋ ಅನ್ನುವ 'ಸಂಶಯ' ವೂ ನಮಗೆ ಬಂತು!!
ಎಲ್ಲ ಮಾಹಿತಿಯೂ ಇದ್ದೋ ಹುಡುಕುವುದು ಕಷ್ಟ ಆಗಿರ್ವಾಗ, ನಾವು ಬರೀ 'ಕನ್ನಡಕದ' ಚಿತ್ರದ ೫೦ ಪ್ರಿಂಟ್ ಹಾಕಿಸಿ ಅದನ್ನುಹಾದಿ-ಬೀದಿಯಲ್ಲಿ 'ಸಿಕ್ಕವ್ರ್ಗೆ' ತೋರಿಸುತ್ತ, ಇದನ್ನು ಹಾಕುವವರು ನಿಮಗೆ ಗೊತ್ತೇ- ಗೊತ್ತೇ ಅಂತ ಕೇಳಲು, ಇಷ್ಟು ದೊಡ್ಡಕನ್ನಡಕ!! ಈ ತರ್ಹದು ಇರ್ತೆ ಅಂತ ನಮಗೆ ಗೊತ್ತೇ ಇರ್ಲಿಲ್ಲ ಹೌದು ಇದನ್ನು 'ಧರಿಸುವವರು' ಯಾರು? ಅಂತ 'ವಿಷಯಾಂತರ'ಮಾಡಲು 'ಅವರನ್ನ' ಹುಡುಕಲೇ ಅಲ್ಲವೇ ನಾವಿಲ್ಲಿ ಅಲೆದಾಡುತಿರ್ವದು ಅಂತ ನಾವು ರೇಗಿ 'ವಿಶ್ವಾಮಿತ್ರ ದೃಸ್ಟಿ' ಅವರೆಡೆಗೆ ಬೀರಿಮುಂದೆ ಹೋದೆವು....
ಎಲ್ಲ ೫೦ ಜನರ ಹತ್ತಿರ ಆಧುನಿಕ 'ಕ್ಯಾಮೆರ' ಫೋನು ಇದ್ದು, ದೂರದವರೆಗೆ ಜೂಮ್ ಮಾಡಿ ಚಿತ್ರ ಕ್ಲಿಕ್ಕಿಸುವ ವ್ಯವಸ್ತೆ ಇತ್ತು.ಹಾಗಾಗಿ ಎಲ್ಲಿಯಾದರೂ ಯಾವೊಬ್ಬ ಗಣೇಶ್ ತರಹದ್ ವ್ಯಕ್ತಿ ಕಂಡರೆ ನಿಂತಲ್ಲೇ ಚಿತ್ರ ಕ್ಲಿಕಿಸಿ ಪಕ್ಕದ ಗಲ್ಲಿ ಗೆ 'ಎಂ ಎಂ ಎಸ 'ಮಾಡುತ್ತಿದ್ದೆವು!! ಆ ಗಲ್ಲಿಯಲ್ಲಿ ಇರವ ನಮ್ಮವ್ರು ಆ ವ್ಯಕ್ತಿಯನ್ನ ವಿಚಾರಿಸಲಿ ಅಂತ... ಎಲ್ಲಿಯಾದರೂ ಅನುಮಾನಸ್ಪದವಾಗಿಇವರೇ 'ಗಣೇಶ್' ಅನ್ನಿಸುವ ವ್ಯಕ್ತಿಯನ್ನ ಫಾಲೋ ಮಾಡಿ ಆಡ್ ಹಾಕಿ ಜೊತೆಗೆ ಕರೆ ತರಲೆಬೇಕು ಎನ್ನುವ 'ಕಟ್' ಅಪ್ಪಣೆಯಾಗಿತ್!
ನಮ್ಮ ಟೀಮಿನ 'ಒಬ್ಬರಿಗೆ' ದೂರದಲ್ಲಿ ವ್ಯಕ್ತಿಯೊಬ್ಬರು ಭಲೇ ತರಾಸ ಪಡುತ್ತ ಗೇಟಿನ ಹೊರಗೆ ಬಂದು ಆ ಕಡೆ ಈ ಕಡೆ ನೋಡಿ'ಮೆತ್ತಗೆ' ಬಚಿಟ್ಟುಕೊಂಡಿದ್ದ 'ಕಸದ' ಪ್ಲಾಸ್ಟಿಕ್ ಚೀಲವೊಂದನ್ನ ಪಕ್ಕದ 'ಖಾಲಿ ' ಸೈಟಿನ ಜಾಗದತ್ತ 'ಎಸೆದು' ಏನೂ ಆಗಿಲ್ಲಎಂಬಂತೆ ಮತ್ತೆ ಮನೆ ಹೊಳ ಹೋಗಲು ಅಣಿಯಾದರು,ಅಲ್ಲಿ(
ಅಸು ಹೆಗ್ಡೆ ಅವ್ರ ಪ್ರತಿಕ್ರಿಯೆ ನೋಡಿ....
ಗೋಕರುಣೆ ಬೀಚ್ | ಸಂಪದ - Sampada
http://sampada.net/blog/%E0%B2%97%E0%B2%A3%E0%B3%87%E0%B2%B6/17/03/2011/30919 ಅಸ್ಟರಲ್ಲಿ ನಮ್ಮ ಟೀಮಿನ ಅವ್ರು 'ಅದೋ' ಅಲ್ಲಿ ನೋಡಿ ಆ ವ್ಯಕ್ತಿಯೇಗಣೇಶ್ ಇರ್ಬೇಕು, ದೇಹಕಾರ ಗಣೇಶ್ ಅವ್ರಿಗ್ ಹೋಲಿಕೆ ಆಗುತ್ತೆ! ಬೇಗ ಬನ್ನಿ ಅವ್ರು ತಪ್ಪಿಸಿಕೊಳ್ಳಬಹುದು, ನಮಮ್ ಟೀಮಿನ೫ ಜನ ತರಾ ತುರಿಯಲ್ಲಿ 'ನಾ ಮೊದಲು' ತಾ ಮೊದಲು ಅಂತ ಗಣೇಶ್ ಅವ್ರಣನ್ ಹಿಡಿಯಲು ತಲ್ಲದುತ್ತ ಓಡಿದೆವು!! ಮತ್ತೆಸುಮ್ನೆನ? ಯಾರ್ಗೂ ಸಿಗದ ಯಾರೂ ನೋಡಿರದ(ಒಬ್ಬರನ್ನ ಬಿಟ್ಟು ) ಗಣೇಶ್ ಅವ್ರನ್ 'ನಾನೇ' ಮೊದಲು ನೋಡಬೇಕು ಎನ್ನುವ 'ದುರಾಶೆ' ಎಲ್ಲರ್ಗೂ :) ಮನೆ ಒಳಗಡೆಯಿಂದ ಬನ್ದಸ್ತೆ 'ಸಾವಕಾಶವಾಗಿ' ಕಸ ಎಸೆದು ಒಳ ಹೋಗುತ್ತಿದ್ದ 'ಅವರನ್ನ'ನಾವೆಲ್ಲಾ ಓಡಿ ಹೋಗಿ ಸುತ್ತು ವರೆದು ಅಡ್ಡ ಹಾಕಿ ನಿಲ್ಲಿಸಿ ಕೊನೆಗೂ 'ಸಿಕ್ಕಿ ಬಿಟ್ಟಿರಿ' ನಮ್ಮ ಕೈಲಿ ತಪ್ಪಿಸಿಕೊಳ್ಳಲು ಸಾಧ್ಯವೇಎಂದೆವು...
ನಾವೆಲ್ಲಾ ಒಟ್ಟಾಗಿ ಓಡಿ ಬರುತ್ತಿರ್ವದು 'ಆವ್ರಿಗ್' ಯಾವ್ದೋ ಇನ್ಕಂ ಟ್ಯಾಕ್ಸ್ ರೇಡ್ ತರಹ- ಪೋಲೀಸರ ರೇಡು ತರಹಕಾಣಿಸಿರಬೇಕು- ಇದು ನಮ್ ಊಹೆ!! , ನಮ್ಮ ಕೈಲಿ 'ಪೇಪರನಲ್ಲಿ' ಸುತ್ತಿದ್ದ 'ಉದ್ದವಾಗಿ' ಕಾಣುತ್ತಿದ್ದ 'ಅದರತ್ತ' ಭಯದಿಂದನೋಡುತ್ತಾ, ಗಡ ಗಡ ನಡುಗುತ್ತ, ನಾನು 'ಎಸೆದಿಲ್ಲ' ನಾನು 'ಎಸೆದಿಲ್ಲ' ಎನ್ನಬೇಕೆ!!
ನನ್ನ ಬಿಟ್ಟು ಬಿಡಿ
ಯಾರೋ ಎಸೆದರು ನಾ ಏನು? ಅಂತ ನೋಡಿದೆ ಅಸ್ಟೆ ಎಂದರು: ಜೇಬಿಂದ ಆ ಕನ್ನಡಕದ ಫೋಟೋ ತೆಗೆದು'ಅದು' ಈ ವ್ಯಕ್ತಿಗ್ ಸೂಟ್ ಆಗುತ್ತಾ ಅಂತ ನಾವ್ ನೋಡಲು, 'ಅವ್ರಿಗ್' ತಮ್ಮ ಆ ದಿನ ನಿತ್ಯದ 'ಮಹಾನ್' ಕಸ ಪಕ್ಕದವರ ಖಾಲಿಸೈಟ್ ಗೆ ಕಸ ಎಸೆಯುವ ಮಹಾನ್ 'ಕಾರ್ಯದ' ಫೋಟೋ ಹೊಡೆದು ಅದನ್ನು ಸಾಕ್ಸಿ ತರಹ ಇಟ್ಟುಕೊಂಡು ನೋಡ್ತವ್ರೆ ಅಂತ ಅನ್ನಿಸ್ತು..
( ಆ ವ್ಯಕ್ತಿ ಭಯ ಪಡ್ತಾ ಕೈಲಿದ್ದ 'ದೋಸೆಗೂ' ಅದರ ಘಮ ಘಮ ವಾಸನೆಗೂ ಕೇರೂ ಮಾಡದೇ ಇದ್ದುದು ನಮಗೆ ಸಂಶಯಬಂತು! 'ಇವ್ರು' ಅವ್ರಲ್ಲವೇನೋ? ಎನ್ನುವ ಭಾವನೆ ನಮಗೆ.. ಸ್ಸಾರ್ ಪಕ್ಕಕೆ ಬನ್ನಿ 'ಮಾತಾಡೋಣ' ! ಏನ್ ರೀ 'ಪಕ್ಕಕ್ಕೆ' ಬಾಅಂತೀರಾ? ಅದೆಲ್ಲ ಆಗೋಲ್ಲ ನಡೆರಿ ಅನ್ನಲು, ನಮ್ಮ ಟೀಮಿನ ಒಬ್ಬರು ಕಣ್ಣು ಸನ್ನೆ ಮಾಡಲು, ಒಬ್ಬರನ 'ಅವ್ರ' ಜೊತೆ 'ಪಕ್ಕಕ್ಕೆ'ಕಳಿಸಿದೆವು ನಾವು ದೂರದಿಂದ 'ವಾಚ್' ಮಾಡುತ್ತಿರಲು ,ಅವ್ರು ತಮ್ಮ 'ದೊಡ್ಡ' ಚೆಡ್ಡಿಯಿಂದ 'ಒಂದಷ್ಟು ಕಾಸನ್ನು ತೆಗೆದು ಮೆತ್ತಗೆನಾವು ಕಳಿಸಿದ ನಮ್ಮ ಟೀಮಿನ ವನ 'ಜೇಬಲ್ಲಿ' ಇತ್ತು, ಕೇಸು ಇಲ್ಲಿಗೆ 'ಸೆಟ್ಲೂ' ಮಾಡಿ ಸ್ಸಾರ್ ಅಂದ್ರು:( ಏನ್ ರೀ ಇದು?ಯಾಕ್ ಸಾಮಿ ಸಾಲಲಿಲ್ಲವ? ಅದ್ಕೆ ಯಾಕೆ ವರಿ, ನಿಮ್ಮ ಅಕೌಂಟ್ ನಂಬರ್ ಹೇಳಿ ಹಣ ಹಾಕುವೆ ಅನ್ನಬೇಕೆ? ನೀವು ಗಣೇಶ್ಅಲ್ವ? 'ಏನ್ ರೀ 'ದೊಡ್ಡದಾಗಿ' ಕಂಡ್ರೆ ನನ್ನೇ ಗಣೇಶ್ ಅನ್ಬೇಕ? ನಾ ಭೀಮಪ್ಪ ಎನ್ನಬೇಕೆ:(
ಅಯ್ಯೋ ಅಂತ ನಾವ್ ತಲೆ ಚಚಿಕೊಳ್ಳಲು, ನೀವು ಪಕ್ಕದ ಖಾಲಿ ಸೈಟಿನಲ್ಲಿ ಕಸ ಎಸೆಯೋರ್ನಹಿಡಿಯೋ ' ಬೀಬೀ ಎಂ ಪೀ''ಸ್ಕ್ವಾಡ್ ' ನವರು ಅಲ್ಲವ?
ಬೀ ಬೀ ಎಂ ಪೀ ನೂ ಅಲ್ಲ, 'ಎಂ ಪೀ' ನೂ ಅಲ್ಲ 'ಆರ್ ಎಂ ಪೀನೂ' ಅಲ್ಲ ಅಂತ ನಾವ್ ಹೇಳಲು!!
ತತ್ ನಾ ನಿಮಗೆ 'ಭಯ' ಬಿದ್ನಲ್ಲ, ಕೊಡ್ರೀ ಆ ನಂ ಕಾಸು ಅಂತ 'ವಾಪಸ್ಸು 'ಇಸಿದುಕೊಂಡು, ಹೊಗೊಗ್ರೀ ಅಂತ ನಮ್ಮನ'ಓಡಿಸಬೇಕೆ'!!
ಇಡೀ ಮಲ್ಲೇಶ್ವರದ ಬೀದಿ-ಗಲ್ಲಿ- ಹುಡುಕಾಡಿ ಅವರಿವರನ್ನ ಕೇಳಿ, 'ಅವ್ರ' ಬಗ್ಗೆ ಹೇಳಿ ಹೇಳಿ ಹೇಳಿ-------------- ಸುಸ್ತಾಗಿನಾವೆಲ್ಲ 'ಅಡಿಗ ಹೋಟೆಲಿಗೆ ' ಹೋಗಿ ಮಸಾಲೆ ದೋಸೆ ಆರ್ಡೆರ್ ಮಾಡಿ ತಿನ್ನುತ್ತಿರ್ವಾಗ, ಒಬ್ಬರು ನಮ ಪಕ್ಕದ ಟೇಬಲ್ ನಲ್ಲಿಕುಳಿತು ನಮ್ಮೆಡೆ ' ಒಂಥರಾ ' ನೋಡ್ತಾ 'ಗಬ್ಬಾ ಗಬ್ಬಾ' ಅಂತ ಮಸಾಲೆ ದೋಸೆ ಮೆಲ್ಲುತ್ತಿರ್ವದು ನೋಡಿ ನಾವೆಲ್ಲಾ ಮೆತ್ತಗ್ಎದ್ದು ಆ ವ್ಯಕ್ತಿ ಹತ್ತಿರ ಹೋಗಿ 'ಗಣೇಶ್ ಈಗಲಾದರೂ' ಸಿಕ್ಕಿರಲ್ಲ ಎನ್ನಲು,
ರೀ ನಾ ಗಣೇಶ್ ಅಲ್ಲ, ಗಜಾನನ!!
ನೀವು ನನ್ನ ತಪ್ಪಾಗಿ ತಿಳಿದುಕೊಂಡಿದ್ದೀರಾ!! ಹೌದು ನೀವೇನು ಕೆಲಸ ಮಾಡುವುದು? ರ್ರೀ ನಾ 'ಏನಾರ' ಮಾಡ್ತೀನಿ 'ನಿಮಗೇನು'ಕಷ್ಟ?
ಹೋಗ್ರೀ ಮೊದಲು ನಿಮ್ ಕೆಲಸ ನೋಡಿ....
ದೋಸೆ ತಿನ್ನಕೂ ಬಿಡಲ್ಲ ಜನ:) ಆಗ ನಮ್ಮ ಟೀಮಿನ ಒಬ್ಬರು, ಇಸ್ತೊತ್ತು ಪಾರ್ಕು,(ವ್ಯಾಮ ಮಾಡೋಲ್ಲ ಒಳ್ಳೆ ಅಂತ ಹೇಳಿನಮ್ಮ ದಿಕ್ಕು ತಪ್ಪಿಸಿ, ಪಾರ್ಕಿಗೆ ಬಂದು ವ್ಯಾಮ ಮಾಡಿ ನಮಮ್ ಕಣ್ಣಿಗೆ 'ಮಂಕು ಬೂದಿ' ಎರಚಿದರೆ?) ನೋಡಿದೆವು, ಮಂತ್ರಿಮಾಲು, ಬಿಗ್ ಬಜಾರು, ತರಕಾರಿ ಮಾರುಕಟ್ಟೆ, ದೇವಸ್ಥಾನಗಳು(ಕಾಡು ಮಲ್ಲೇಶ್ವರ) ಆಟದ ಮೈದಾನ(!) ಹ್ಹೀ ಹ್ಹೆ ಹ್ಹೂ ಎಂಬನಗೆ ಕ್ಲಬ್ಬುಗಳು ಓಹೋ ಎಲ್ಲಿಯೂ ಸಿಗದೇ ಇರವ ಅವ್ರು ಇನ್ನು ಸಿಗ್ತಾರೆ ಅಂತ ಅನ್ನಿಸೋಲ್ಲ, ನಾವ್ ಮಧ್ಯ ರಾತ್ರಿ ಗಂಟ ಕಾಯ್ವ,ಆಮೇಲೆ ಎಲ್ಲಿ 'ಸರಿ ರಾತ್ರಿ ' ದೀಪ ಬೆಳಗಿ 'ಕೀ ಬೋರ್ಡು' ಕುಟ್ಟುವ ಶಬ್ದ ಬರುತ್ತೋ ಆ ಮನೆಗೆ ಧಾಳಿ ಮಾಡಿದರೆ ಆಯ್ತು!! ರೀಎಲ್ ರೀ ಇದ್ದೀರಾ ಈಗ? ಈ ಜಮಾನದಲ್ಲಿ ಎಲ್ರೂ ಮನೇಲೆ ಕುಳಿತು ಹಗಲು ರಾತ್ರಿ ಕೆಲಸ ಮಾಡ್ತಾರೆ, ಹೀಗೆ ದೀಪ ಬೆಳಗುತ್ತಿರ್ವ ಕೀ ಬೋರ್ಡು ಕುಟುವ ಶಬ್ದ ಬರ್ವ ಎಷ್ಟು ಮನೇಲಿ ಹೋಗಿ ನಾವ್ ನೋಡೋಕೆ ಆಗ್ತೆ? ಮತ್ತೆ ಬೇರೆ ಏನೂಉಪಯವಿಲ್ಲ , ಸ್ಸರಿ ಸ್ಸರಿ ಅದನೆ ಮಾಡೋಣ..
ತಲಾ ಇಬ್ಬರಂತೆ ಒಂದೊಂದು ಓಣಿ-ಗಲ್ಲಿ-ಕ್ರಾಸು ಆಯ್ದುಕೊಂಡು, ದೀಪ ಬೆಳಗಿ ಕೀ ಬೋರ್ಡು ಕುಟ್ಟುವ ವ್ಯಕ್ತಿಗಾಗಿ ಹುಡುಕುತ್ತಹೊರಟೆವು:) ಅದಾಗಲೇ ಚಳಿ ವ್ಯಾಪಕ ಆಗಿದ್ದರಿಂದ ಎಲ್ರೂ ಬೇಗನೆ ಮಲಗಿ ನಿದ್ರಿಸುತ್ತಿರ್ವಾಗ, 'ಜಗವೆಲ್ಲ ಮಲಗಿರಲು'ತಾವೊಬ್ಬರು' ಎದ್ದು ........ ವ ಅವರನ್ನ ಹುಡುಕಲು ಮೈ ಬಿಗಿ ಆಗಿ ಹಿಡಿದು ನಾವ್ ಚಲೀಲಿ ಆ ವ್ಯಕ್ತಿಗಾಗಿ ಹುಡುಕುತ್ತಿದ್ದೆವು..ನಮಮ್ ಸುದೈವಕ್ಕೆ ಯಾವೊಬ್ಬ 'ಬೀಟು ಪೊಲೀಸಪ' ಬಾರದೆ ಇದ್ದುದು ಆಸ್ಚರ್ಯ!! ಪೇಪರು ಸುತ್ತಿದ ಆ ದೋಸೆ ಅದುಯಾವಾಗಲೋ ಬಾಡಿ -ಮುದುರಿ -ಸೊರಗಿ ಹೋಗಿ ಅದನ್ನು ನಾವೇ 'ಸ್ವಾಹ' ಮಾಡಿ ಆಗಿತ್ತು!
'ಒಂದೊಂದು ದೋಸೆಯ ಮೇಲೂ ತಿನ್ನೋರ ಹೆಸರು' ಬರೆದಿಹುದು :()
ದೂರದಲ್ಲಿ, ದೀಪ ಬೆಳಗುತ್ತಿದ್ದ ಮನೆಯ ಸುತ್ತ ಮುತ್ತ ಅಡಗಿ ನಾವು ಮೆಲ್ಲಗೆ ಇಣುಕಿ ನೋಡಲು, ಒಬ್ಬ ವ್ಯಕ್ತಿ ತನ್ನ ಸಿಸ್ಟಮ್ಮಿನಲ್ಲಿ
'ಕಣ್ಣಿಗೆ ಕಾಣದೆ ಕುತೂಹಲ ಮೂಡಿಸುವುದು ಹೇಗೆ'
ಎಂಬ ಲೇಖನ ಓದುತಿದ್ದ, ಓಹೋ ಇವರೇ ಅವ್ರೆ ಇರ್ಬೇಕು ಅಂತ ಇನ್ನೇನು ಮನೆ ಒಳಗಡೆ ಹಾರಬೇಕು, ಅಸ್ಟರಲ್ಲಿ .. ಬೌ ಬೌ.ಓಓ ಒಹ್ ಮೈ ಗಾಡು! ಎರಡು 'ಆಳೆತ್ತರದ'ನಾಯಿಗಳು....!!
ಓಡ್ರೋ ನಾಯಿ- ನಾಯಿ-ನಾಯಿ ...ಅಂತ ಎಲ್ರೂ ದಿಕ್ಕಾಪಾಲು......!
ಮತ್ತೆ ಇನ್ನೇನು?
ನಾವು ಉಳಿದರೆ ತಾನೆ 'ಗಣೇಶ್' ನ ಹಿಡಿಯೋದು? ಮೊದಲು ನಾವು ಕಾಲಿಗೆ ಬುಧಿ ಹೇಳಬೇಕು!!
ಆಮೇಲೆ ಗಣೇಶ ನ ನೋಡೋಣ...
ಎಲ್ರೂ 'ರೇಸಿಗೆ' ಬಿದ್ದವರಂತೆ ಚೆಲ್ಲಾ-ಪಿಲ್ಲಿ :)
ಎಲ್ರೂ ಒಂದೆಡೆ ಸೇರಿ, ಈ ಗಣೇಶ್ ನ ಹಿಡಿಯೋ ಕೆಲಸವನ್ನ ನಮಗೆ ವಹ್ಸಿ, 'ಅವರೆಲ' ತಮ್ಮ ತಮ ಮನೇಲಿ ಆರಾಮಾಗಿಮಲಗಿದ್ದರೆ:) ನಾವು ಇಲ್ಲಿ ಚಳಿಯಲ್ಲಿ 'ಗಣೇಶ್' ಗಾಗಿ ಹುಡುಕಾಡಲು ಹೋಗಿ, ನಾಯಿ ಕಚ್ಚಿ..ಡು ೧೧ ಇಂಜಕ್ಚನ್ ತೆಗೆದುಕೊಳ್ಳೋದು!!
ಬನ್ರಪ್ಪ ನಾವೆಲ್ಲಾ ವಾಪಸ್ಸು ಹೋಗೋಣ, ಆ 'ಗಣೇಶ' ರನ ನಮ್ಮಿಂದ 'ಹಿಡಿಯೋದು ಆಗಲ್ಲ', ನೋಡೋದು ಅಂತೂ 'ದೂರದ'ಮಾತು!! ಅದಕ್ಕಾಗಿ, 'ವಿದೇಶದಿಂದ' ತಜ್ಞರನ ಕರೆಸೋಣ..
ಅಮೆರಿಕಾದವರೇ ಬೆಸ್ಟ್ ಅನ್ಸುತ್ತೆ, ಸದಂ ನ, ಲಾಡೆನ್ ನ ಅತಳ-ಪಾತಾಳ - ..ಲ್ಲ ಹುಡುಕಾಡಿ ಹಿಡಿದರಲ್ಲ!!
ಅದಕ್ಕಾಗಿ ' ಸ .... ಗೌಡರನ್ನ' ರಿಕ್ವೆಸ್ಟ್ ಮಾಡಿ, 'ವಿಶೇಷ ಗಣೇಶ ಅನುದಾನ' ಅಂತ ಹಣ ಬಿಡುಗಡೆ ಮಾಡಿಸಿ..................?
ಗಣೇಶರನ್ನ ನಾವು ಹಿಡಿಯಲೂ ಆಗಲ್ಲ -ನೋಡಲೂ ಆಗಲ್ಲ , ಅವರಾಗೆ ಬಂದು ನಮಗೆ 'ಸಿಗಬೇಕು' ಎನ್ನುವ ಜ್ಞಾನೋ .....................ಗಿ ನಾವೆಲ್ಲಾನಮ್ ಮನೆ ಸರಿದೆವು................!!
ಅದು 'ಗಣೇಶನ' ಆಟ.......................
ಮತ್ತು ಅದು ಮುಂದುವರೆಯಲಿದೆ:)
ಚಿತ್ರ ಮೂಲ
ಕನ್ನಡಕ( ಗಣೇಶರ ಪ್ರೋಫಿಲಿಂದ )
http://sampada.net/user/%E0%B2%97%E0%B2%A3%E0%B3%87%E0%B2%B6
ವಿನಾಯಕನ ಚಿತ್ರಗಳು :
http://www.fringu.com/wallpapers/tag/ganesh/opt/3-0-0/
http://jokesprank.com/blog/hindi-sms-jokes/lord-ganesha-singer-kailash-kher-hindi-jokes-funny-hindi-bakwaas-jokes.
http://mydreampic.blogspot.com/2009/09/sooooo-cute-ganesh-ji.html
ಪ್ರತಿಕ್ರಿಯೆ (3)